ಕಾಸರಗೋಡು: ರಂಗ ಚಿನ್ನಾರಿಯ ಸಂಗೀತ ಘಟಕ ಸ್ವರ ಚಿನ್ನಾರಿಯ ಎರಡನೇ ಸರಣಿ ಕಾರ್ಯಕ್ರಮ 'ಕನಕ ಸ್ಮರಣೆ' ನ, 28ರಂದು ಸಂಜೆ 5ಕ್ಕೆ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಜರುಗಲಿದೆ.
ತುಳು ಸಾಹಿತಿ ಸತೀಶ್ ಸಾಲ್ಯಾನ್ ಹಾಗೂ ಕಾಸರಗೋಡು ಸರ್ಕಾರಿ ಕಾಲೇಜಿನ ಸಹಪ್ರಾಧ್ಯಾಪಕಿ ಡಾ. ಆಶಾಲತಾ ಉದ್ಘಾಟಿಸುವರು. ಸ್ವರ ಚಿನ್ನಾರಿ ಗೌರವಾಧ್ಯಕ್ಷ ಶ್ರೀಕೃಷ್ಣಯ್ಯ ಅನಂತಪುರ ಅಧ್ಯಕ್ಷತೆ ವಹಿಸುವರು. ಹರಿದಾಸ, ಸಂಕೀರ್ತನಕಾರ ಮಧ್ವಾಧೀಶ ವಿಠಲ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ರಂಗ ಚಿನ್ನಾರಿ ನಿರ್ದೇಶಕರಾದ ಕಾಸರಗೋಡು ಚಿನ್ನಾ, ಸತೀಶ್ಚಂದ್ರ ಭಂಡಾರಿ ಕೋಳಾರು ಗೌರವ ಉಪಸ್ಥಿತರಿರುವರು. ಸಂಜೆ 5.30ರಿಂದ ಕನಕದಾಸರ ಗೀತೆಗಳ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯುವುದು.