ಪಾಲಕ್ಕಾಡ್: 16 ವರ್ಷದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಡಿವೈಎಫ್‍ಐ ಮುಖಂಡನನ್ನು ಬಂಧಿಸಲಾಗಿದೆ. ಪಾಲಕ್ಕಾಡ್ ಚೆರ್ಪುಳಸ್ಸೆರಿ ಮೂಲದ ಕೆ ಅಹಮದ್ ಬಂಧಿತ ಆರೋಪಿ. ನಿನ್ನೆ ಸಂಜೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಬಾಲಕಿ ಮತ್ತು ಆಕೆಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ದೂರಿನಲ್ಲಿ ಹುರುಳಿರುವುದು ಸ್ಪಷ್ಟವಾದಾಗ ಪೋಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಇದೇ ವೇಳೆ ಆರೋಪಿ ಮಾಜಿ ಹಣಕಾಸು ಸಚಿವ ಥಾಮಸ್ ಐಸಾಕ್ ಜೊತೆಗಿರುವ ಫೆÇೀಟೋ ಕೂಡ ಹೊರಬಿದ್ದಿದೆ.