ಕುಂಬಳೆ: ಸರೋವರ ಕ್ಷೇತ್ರ ಅನಂತಪುರ ಶ್ರೀಅನಂತಪದ್ಮನಾಭ ಕ್ಷೇತ್ರದಲ್ಲಿ ಕೌತುಕವೆಂಬಂತೆ ಹಠಾತ್ ಕಂಡುಬಂದ ಮರಿ ಬಬಿಯಾ ಇದೀಗ ಭ|ಕ್ತರ ಕೇಂದ್ರಬಿಂದುವಾಗಿದ್ದಾನೆ.
ಹಳೆಯ ಬಬಿಯಾ ಮೊಸ|ಳೆ ಮೃತಪಟ್ಟು ಒಂದು ವರ್ಷ ಒಂದು ತಿಂಗಳ ಅವಧಿಯಲ್ಲಿ ಪ್ರತೀತಿಯಂತೆ ಮತ್ತೊಂದು ಮರಿ ಮೊಸಳೆ ಕಳೆದ ಕೆಲವು ದಿನಗಳಿಂದ ಕೆಲವರಿಗೆ ಕಾಣಿಸಿಕೊಂಡಿದ್ದು, ಶನಿವಾರ ಮಧ್ಯಾಹ್ನ ಅರ್ಚಕರು ಪ್ರತ್ಯಕ್ಷ ದರ್ಶನಗೈದು ಸ್ಥಿರೀಕರಿಸಿದ್ದು, ವೀಕ್ಷಿಸಲು ನೂರಾರು ಜನರ ತಂಡ ಆಗಮಿಸುತ್ತಿದೆ.
ಹಿರಿಯರ ನೆನಹು:
ಈ ಮಧ್ಯೆ ಸ್ಥಳೀಯ ಹಿರಿಯರೊಬ್ಬರು ನೆನಪಿಸಿಕೊಂಡಿರುವಂತೆ ಬಬಿಯಾನ ಐತಿಹ್ಯಗಳು ವಿಸ್ಕøತವಾದುದು. 1945ರ ಪ್ರಥಮ ಮಹಾಯುದ್ದದ ವೇಳೆ ಅನಂತಪುರ ಸಹಿತ ಪರಿಸರ ಪ್ರದೇಶ ಬ್ರಿಟಿಷ್ ಸೈನ್ಯಾಧೀನ ಒಳಪಟ್ಟು ಜನರಿಗೆ ನಿಬರ್ಂಧಿತವಾಗಿತ್ತು. ಗಾಂಧಿಜಿಯವರ ಕರೆಯಂತೆ ಆ ಕಾಲದ ಯುವಕರು ಬ್ರಿಟಿಷ್ ಸೈನ್ಯಕ್ಕೆ ಸೇರಿಕೊಳ್ಳಲು ಈ ಪ್ರದೇಶದ ಅನಂತಪುರ ತರಬೇತಿ-ನಿಯುಕ್ತಿಗೆ ಸೇರಿಕೊಂಡಿದ್ದರಿಂದ ಜನರನ್ನು ಸ್ಥಳಾಂತರಿಸಲಾಗಿತ್ತು. ದೇವಾಲಯದ ಪೂಜೆಗೆ ಅರ್ಚಕರಿಗೆ ದಿನದಲ್ಲಿ ಒಂದು ಹೊತ್ತು ನಿಯಮಿತ ವೇಳೆ ಬರಲು ಮಾತ್ರ ಅವಕಾಶವಿತ್ತು. ಈ| ಸಂದರ್ಭ ಅಂದಿನ ಮಿಲಿಟರಿ ಅ|ಧಿಕಾರಿಗಳ ಕಣ್ಣಿಗೆ ಸರೋವರದಲ್ಲಿ ಸ್ವಚ್ಚಂದವಾಗಿ ಈಜಾಡುವ ಬಬಿಯಾ ಕಣ್ಣಿಗೆ ಬಿದ್ದಿದ್ದು, ಬೆದರಿದ ಅ|ಧಿಕಾರಿ ಗುಂಡಿಟ್ಟು ಸಾಯಿಸಿದ್ದರು. ಅದಾದ ಬಳಿಕ ಮರುದಿನ ಮತ್ತೊಂದು ಮೊಸ|ಳೆ ಪ್ರತ್ಯಕ್ಷವಾಗಿದ್ದು, ಮಾಡಿದ ಅವಾ|ಂತರಕ್ಕೆ ಬ್ರಿಟಿಷ್ ಸೈನ್ಯಾಧಿಕಾರಿ ಸ|ಂಕಷ್ಟ ಅನುಭವಿಸಿ, ಬಳಿಕ ತಪ್ಪೊಪ್ಪಿ ಸೇವೆ ಸಲ್ಲಿಸಿದರೆಂದು ಹಿರಿಯರು ನೆನಪಿಸುತ್ತಾರೆ. ಆ ಸಂದರ್ಭ ಬಂದ ಬಬಿಯಾ ಮೊಸ|ಳೆ ಕಳೆದ ವರ್ಷ ಅಕ್ಟ|ಓಬರ್ 9 ರ|ಂದು ಮೃತಪಟ್ಟಿದ್ದು, ಇದಾಗಿ ಒಂದುವರ್ಷ ಒಂದು ತಿಂಗಳಲ್ಲಿ ಇದೀಗ ಹೊಸ ಬಬಿಯಾ ಪ್ರತ್ಯಕ್ಷಗೊಂಡಿರುವುದು ಆಸ್ತಿಕ ಬಂಧುಗಳ ಭಕ್ತಿ ಪರಾಕಾಷ್ಠೆಗೆ ಕಾರಣವಾಗಿದೆ.
ಭಾನುವರ ಆರು ಸಾವಿರಕ್ಕಿಂತಲೂ ಹೆಚ್ಚು ಮಂದಿ ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನಿಡಿದ್ದು, ಮಧ್ಯಾಹ್ನ ಸಾವಿರಕ್ಕೂ ಮಿಕ್ಕಿದ ಭಕ್ತಾದಿಗಳು ಮಧ್ಯಾಹ್ನ ಭೋಜನ ಸ್ವೀಕರಿಸಿದ್ದಾರೆ. ಭಾನುವಾರ ಬೆಳಗ್ಗಿನಿಂದಲೇ ದ್ಯವಸ್ವರೂಪಿ ಮೊಸಳೆ ಭಕ್ತಾದಿಗಳಿಗೆ ದರ್ಶನ ನೀಡಲಾರಂಭಿಸಿದೆ. ಕೊಲ್ಲಂ ಹಾಗೂ ಇತರೆಡೆಯಿಂದ ಆಗಮಿಸಿದ ಭಕ್ತಾದಿಗಳು ಮೊಸಳೆಯನ್ನು ಕಂಡು ಪ್ರಾರ್ಥನೆ ಸಲ್ಲಿಸಿದ್ದಾರೆ. ಮೊಸಳೆಗೆ ಮಧ್ಯಾಹ್ನದ ನೈವೇದ್ಯವನ್ನೊದಗಿಸುವುದೂ ಸೇರಿದಂತೆ ವಿವಿಧ ಕ್ರಿಯಾದಿಗಳ ಬಗ್ಗೆ ದೇಸ್ಥಾನದ ತಂತ್ರಿವರ್ಯರು, ದೈವಜ್ಞರು,ಆಡಳಿತ ಮಂಡಳಿಯವರ ಅಭಿಪ್ರಾಯ ಕೇಳಿ ಮುಂದುವರಿಯಲಾಗುವುದು ಎಂದು ದೇವಸ್ಥಾನನ ಜಿರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ತಿಳಿಸಿದ್ದಾರೆ.
2023ರ ಅ. 9ರಂದು ಬಬಿಯಾ ಹೆಸರಿನ ಮೊಸಳೆ ಮೃತಪಟ್ಟ ಒಂದನೇ ವರ್ಷಾಚರಣೆ ಕಳೆದು ಒಂದು ತಿಂಗಳ ನಂತರ ಕೆರೆಯಲ್ಲಿ ಮೊಸಳೆ ಕಾಣಿಸಿಕೊಂಡಿದೆ.
ಅನಂತಪುರದ ಪ್ರತ್ಯಕ್ಷ ದೈವ ಮೊಸಳೆ ಮಹಾವಿಷ್ಣುಸ್ವರೂಪಿಯಾಗಿದ್ದು, ಮೊಸಳೆ ದರ್ಶನ ಸಾಕ್ಷಾತ್ ದೇವರನ್ನು ದರ್ಶಿಸಿದಂತೆ ಭಾಸವಾಯಿತು ಎಂಬುದಾಗಿ ಕೊಲ್ಲಂನಿಂದ ಆಗಮಿಸಿದ ಭಣಕ್ತಾದಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.