ಕಾಸರಗೋಡು :ಜಿಲ್ಲೆಯಲ್ಲಿ ಕುಟುಂಬಶ್ರೀ ಮೂಲಕ ಜಾರಿಗೊಳಿಸಿದ ಕೊರಗ ಸ್ಪೆಷಲ್ ಪ್ರಾಜೆಕ್ಟಿನ ಸ್ಪೆಷಲ್ ಪ್ರಾಜೆಕ್ಟ್ ಕೋ ಆರ್ಡಿನೇಟರ್ (ಅರ್ಹತೆ ಎಂ.ಎಸ್.ಡಬ್ಲ್ಯು/ ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಟ್ರೈಬಲ್ ವಲಯದಲ್ಲಿ ಎರಡು ವರ್ಷಗಳ ಕೆಲಸದ ಅನುಭವ, ಗೌರವಧನ ಮಾಸಿಕ 30,000 ರೂಪಾಯಿ), ಅಸಿಸ್ಟೆಂಟ್ ಕೋ ಆರ್ಡಿನೇಟರ್ (ಅರ್ಹತೆ ಯಾವುದೇ ವಿಷಯದಲ್ಲಿ ಪದವಿ, ಟ್ರೈಬಲ್ ವಲಯದಲ್ಲಿ ಎರಡು ವರ್ಷಗಳ ಕೆಲಸದ ಅನುಭವ ಮತ್ತು ಗೌರವಧನ ಮಾಸಿಕ 20,000 ರೂಪಾಯಿ) ಎಂಬೀ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರತ್ಯೇಕ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ನೇಮಕಾತಿ ನಡೆಯಲಿದ್ದು, ಯೋಜನೆ ನಡೆಯುವ ಪ್ರದೇಶದಲ್ಲಿ ನೆಲೆಸಿರುವ ಪರಿಶಿಷ್ಟ ವರ್ಗ ವಿಭಾಗದಲ್ಲಿರುವವರು, ಕನ್ನಡ ಮತ್ತು ತುಳು ಭಾಷೆ ಮಾತನಾಡುವವರು ಮತ್ತು ಕೊರಗ ಸಮುದಾಯದಲ್ಲಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ನೇಮಕಾತಿ ಅವಧಿಯು ಒಂದು ವರ್ಷ. ಬಯೋಡಾಟಾ, ಪ್ರಮಾಣಪತ್ರಗಳ ಸ್ವಯಂ ದೃಢೀಕರಿಸಿದ ಪ್ರತಿಗಳು, ಬಿಳಿ ಕಾಗದದ ಮೇಲೆ ಬರೆದಿರುವ ಅರ್ಜಿಯೊಂದಿಗೆ ನವೆಂಬರ್ 30 ರಂದು ಸಂಜೆ 5 ಗಂಟೆಯೊಳಗೆ ಜಿಲ್ಲಾ ಮಿಷನ್ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು. ಯಾವುದೇ ಸಂದರ್ಭದಲ್ಲಿ ಮೂಲ ಪ್ರಮಾಣಪತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬಾರದು. ವಿಳಾಸ ಜಿಲ್ಲಾ ಮಿಷನ್ ಕೋ ಆರ್ಡಿನೇಟರ್, ಕುಟುಂಬಶ್ರೀ, ಸಿವಿಲ್ ಸ್ಟೇಷನ್, ಕಾಸರಗೋಡು, ಪಿನ್ ಕೋಡ್ 671 123. ದೂರವಾಣಿ ಸಂಖ್ಯೆ 04994 256111, 9747534723.