ಇಂಫಾಲ: ಮಣಿಪುರ ಹಿಸಾಚಾರಕ್ಕೆ ಸಂಬಂಧಿಸಿದಂತೆ ರಚಿಸಲಾದ 'ಮಣಿಪುರ ಫೈಲ್ಸ್' ಕೃತಿಯ ರಚನೆಕಾರ ಪ್ರಣವಾನಂದ ದಾಸ್ ವಿರುದ್ಧ ಇಂಫಾಲ ಪೂರ್ವ ಜಿಲ್ಲೆಯ ಪೊರೊಂಪಾಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂಫಾಲ: ಮಣಿಪುರ ಹಿಸಾಚಾರಕ್ಕೆ ಸಂಬಂಧಿಸಿದಂತೆ ರಚಿಸಲಾದ 'ಮಣಿಪುರ ಫೈಲ್ಸ್' ಕೃತಿಯ ರಚನೆಕಾರ ಪ್ರಣವಾನಂದ ದಾಸ್ ವಿರುದ್ಧ ಇಂಫಾಲ ಪೂರ್ವ ಜಿಲ್ಲೆಯ ಪೊರೊಂಪಾಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ಸಾಂನ ಸಿಲ್ಚಾರ್ ಮೂಲದ ಲೇಖಕ ಪ್ರಣಾವನಂದ ಅವರು ರಚಿಸಿರುವ 'ಮಣಿಪುರ ಫೈಲ್ಸ್' ಕೃತಿಯು ವಿವಿಧ ಗುಂಪುಗಳ ನಡುವೆ ದ್ವೇಷ ಸೃಷ್ಟಿಸುವಂತಿದೆ ಎಂದು ಯುವ ಹೋರಾಟಗಾರ ಲುವಾಂಗ್ಚಾ ಯು. ದೂರು ನೀಡಿದ್ದರು.
ಧರ್ಮ ಹಾಗೂ ಎರಡು ಧಾರ್ಮಿಕ ಗುಂಪುಗಳ ನಡುವೆ ವೈಷಮ್ಯ ಹುಟ್ಟುಹಾಕುವ, ಜನರ ನಂಬಿಕೆಗೆ ಧಕ್ಕೆ ತರುವ ಹಾಗೂ ಧರ್ಮದ ನಂಬಿಕೆಗಳನ್ನು ಅವಮಾನಿಸುವ ರೀತಿಯಲ್ಲಿ ಕೃತಿಯನ್ನು ರಚಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಮೈತೇಯಿ ಹಾಗೂ ಕುಕಿ ಸಮುದಾಯದ ನಡುವೆ ಕಳೆದ ಮೇ ತಿಂಗಳಿಂದ ಆರಂಭವಾದ ಹಿಂಸಾಚಾರದಲ್ಲಿ 180ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಸಾವಿರಕ್ಕೂ ಹೆಚ್ಚು ಜನ ಮನೆ ಕಳೆದುಕೊಂಡಿದ್ದಾರೆ.