ಕುಂಬಳೆ: ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ (ಯೋಜನೆ 2023-24) ಆಯೋಜಿಸಿರುವ ಕನ್ನಡ ವಾಚನಾ ಸ್ಪರ್ಧೆಯ ಜಿಲ್ಲಾ ಮಟ್ಟದ ಸ್ಪರ್ಧೆಗಳು ಶುಕ್ರವಾರ ಕುಂಬಳೆ ಜಿ.ಎಚ್.ಎಸ್. ಶಾಲೆಯಲ್ಲಿ ನಡೆಯಿತು.
ಕೇರಳ ಸ್ಟೇಟ್ ಲೈಬ್ರರಿ ಕೌನ್ಸಿಲ್ ಸದಸ್ಯ ಪಿ. ಕೆ. ಅಹ್ಮದ್ ಹುಸೇನ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷÀ ಅಬ್ದುಲ್ಲಾ ಕೆ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಿ. ಕಮಲಾಕ್ಷ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶ್ರೀಕುಮಾರಿ ಟೀಚರ್ ವಂದಿಸಿದರು.