ಕಾಸರಗೋಡು: ಗಡಿನಾಡಿನಲ್ಲಿ ಕನ್ನಡ ಭಾಷೆ, ಸಂಸ್ಕ್ರತಿಯ ಮೇಲಾಗುವ ದಬ್ಬಾಳಿಕೆ ಎದುರಿಸುವಲ್ಲಿ ಪಕ್ಷಭೇದ ಮರೆತು ಕನ್ನಡಿಗರು ಒಂದಾಗಬೇಖು ಎಂಬುದಾಘಿ ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ತಿಳಿಸಿದ್ದಾರೆ.
ಅವರು ಕಾಸರಗೋಡು ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ವತಿಯಿಂದ ಶ್ರೀರಾಮನಾಥ ಸಾಂಸ್ಕøತಿಕ ಭವನದಲ್ಲಿ ಆಯೋಜಿಸಲಾಗಿದ್ದ ಕಾಸರಗೋಡು ಕನ್ನಡ ರಾಜ್ಯೋತ್ಸವ ಉದ್ಗಾಟಿಸಿ ಮಾತನಾಡಿದರು. ದೇಶದ ಅಭಿವೃದ್ಧಿಗೆ ಧರ್ಮ ಮತ್ತು ರಾಜಕೀಯ ಎರಡೂ ಅನಿವಾರ್ಯ, ಆದರೆ ಧರ್ಮದ ಹೆಸರಲ್ಲಿ ರಾಜಕೀಯ ಪ್ರವೇಶಿಸದಂತೆ ಜಾಗ್ರತೆವಹಿಸಬೇಕು ಎಂದು ತಿಳಿಸಿದರು. ಈ ಸಂದರ್ಭ ಕನ್ನಡ ಹೋರಾಟಗಾರ, ನಿವೃತ್ತ ಶೀಕ್ಷಕ ಎಂ.ವಿ ಮಹಾಲಿಂಗೇಶ್ವರ ಭಟ್ ಅವರಿಗೆ ಕಾಸರಗೋಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಭಾಸ್ಕರ ಅಭಿನಂದನಾ ಭಾಷಣ ಮಾಡಿದರು. ಕರ್ನಾಟಕ ಜಾನಪದ ಕಲಾ ಒಕ್ಕೂಟ ರಾಜ್ಯಾಧ್ಯಕ್ಷ ಕೆ. ನಾಗರಾಜ್, ಅಂತಾರಾಷ್ಟ್ರೀಯ ತಮಟೆ ಕಲಾವಿದ ಕುಂತೂರ್ ಕುಮಾರ್, ಧಾರ್ಮಿಕ ಮುಖಂಡ ವೆಂಕಟ್ರಮಣ ಹೊಳ್ಳ ಮುಕ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾವ್ಯಾಕುಶಲ ವಂದಿಸಿದರು.
ಸಾಂಸ್ಕøತಿಕ ಕಲಾ ಕಾರ್ಯಕ್ರಮದ ಅಂಗವಾಗಿ ಕನ್ನಡ ಕಲಾ ವೈಭವ ಬೆಂಗಳೂರು ವತಿಯಿಂದ ತಮಟೆ ವಾದನ, ವೀರಗಾಸೆ, ಸಮೂಹ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ಜರುಗಿತು. ದಿವಾಕರ ಪಿ.ಅಶೋಕ್‍ನಗರ, ಕಾವ್ಯಾದೀಪ್ತಿ ಕುಶಲ, ಅಶ್ವಿನಿಗುರುಪ್ರಸಾದ್, ತ್ರಿಶಾ ಜಿ.ಕೆ, ಬಬಿತಾ, ದೀಪ್ತಿನೇಘರಾಜ್, ಕೃಷ್ಣಾನಿಧಿ ಅವರಿಂದ ಸಮೂಹ ಗಾಯನ ಕಾರ್ಯಕ್ರಮ ನಡೆಯಿತು.