ನವದೆಹಲಿ: ಅದಾನಿ ಸಮೂಹದ ಕುರಿತು ಲೇಖನ ಬರೆದಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪತ್ರಕರ್ತರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಬಂಧನದಿಂದ ರಕ್ಷಣೆ ನೀಡಿದೆ.
ನವದೆಹಲಿ: ಅದಾನಿ ಸಮೂಹದ ಕುರಿತು ಲೇಖನ ಬರೆದಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪತ್ರಕರ್ತರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಬಂಧನದಿಂದ ರಕ್ಷಣೆ ನೀಡಿದೆ.
ಅದಾನಿ ಸಮೂಹದ ಕುರಿತು ಲೇಖನ ಬರೆದಿದ್ದಾರೆ ಎನ್ನಲಾಗಿರುವ ಪತ್ರಕರ್ತರಾದ ಬೆಂಜಮಿನ್ ನಿಕೋಲಸ್ ಬ್ರೂಕ್ ಪಾರ್ಕಿನ್ ಮತ್ತು ಕ್ಲೋಯ್ ನೀನಾ ಕಾರ್ನಿಷ್ ಅವರಿಗೆ ಗುಜರಾತ್ ಪೊಲೀಸರು ಸಮನ್ಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಇಬ್ಬರೂ ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು.
ಪತ್ರಕರ್ತರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಹಾಗೂ ಪಿ.ಕೆ. ಮಿಶ್ರಾ ಅವರು, 'ಮುಂದಿನ ವಿಚಾರಣೆಯ ದಿನಾಂಕದವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು. ಹಾಗೂ ಅರ್ಜಿದಾರರು ಪೊಲೀಸರ ವಿಚಾರಣೆಗೆ ಸಹಕರಿಸಬೇಕು' ಎಂದು ಹೇಳಿದ್ದಾರೆ.
'ಅದಾನಿ ಸಮೂಹದ ಕುರಿತ ಲೇಖನವನ್ನು ನಮ್ಮ ಕಕ್ಷಿದಾರರು ಬರೆದದ್ದಲ್ಲ' ಎಂದು ಇಬ್ಬರು ಅರ್ಜಿದಾರರ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ. ಈ ಪ್ರಕರಣ ಕುರಿತ ವಿಚಾರಣೆಯನ್ನು ಮುಂದೂಡಲಾಗಿದೆ.