ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಮಲಯಾಳ ವಿಭಾಗ ಹಾಗೂ ಕಣ್ಣೂರು ವಿಶ್ವವಿದ್ಯಾನಿಲಯ ಬಹುಭಾಷಾ ಅಧ್ಯಯನ ಕೇಂದ್ರ ಜಂಟಿ ಸಹಯೋಗದೊಂದಿಗೆ ಜಾನಪದ ಕಾರ್ಯಾಗಾರ ನಡೆಯಿತು. ವಿಶ್ವ ವಿದ್ಯಾಲಯದ ಸಾಬರಮತಿ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಪ್ರಭಾರಿ ಉಪಕುಲಪತಿ ಪೆÇ್ರ. ಕೆ.ಸಿ. ಬೈಜು ಉದ್ಘಾಟಿಸಿದರು.
ಡಾ. ಎ.ಎಂ. ಶ್ರೀಧರನ್ ಅಧ್ಯಕ್ಷತೆ ವಹಿಸಿದ್ದರು. 'ಜಾನಪದ ಮತ್ತು ಜಾನಪದ ಅಧ್ಯಯನ: ನಿನ್ನೆ, ಇಂದು ಮತ್ತು ನಾಳೆ' ಎಂಬ ವಿಷಯದ ಬಗ್ಗೆ ಪೆÇ್ರ. ರಾಘವನ್ ಪಯ್ಯನಾಡ್ ಮುಖ್ಯ ಭಾಷಣ ಮಾಡಿದರು. ಮಲಯಾಳ ವಿಭಾಗದ ಅಧ್ಯಕ್ಷ ಡಾ. ಆರ್. ಚಂದ್ರ ಬೋಸ್, ಪೆÇ್ರ. ವಿ. ರಾಜೀವ್, ಅನಸ್ವರ ಎಸ್ ಮೊದಲಾದವರು ಉಪಸ್ಥಿತರಿದ್ದರು. ಎರಡು ದಿವಸಗಳ ಕಾಲ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.