HEALTH TIPS

ಕೊಂಡೆವೂರು ವಿದ್ಯಾಪೀಠ ಶಿಶುವಾಟಿಕಾದಲ್ಲಿ ಕಲಿಕೋಪಕರಣಗಳ ವಿತರಣೆ

                 ಉಪ್ಪಳ: ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ಶಿಶುವಾಟಿಕಾ ವಿಭಾಗದ ಚಿಣ್ಣರಿಗೆ ವಿವಿಧ ರೀತಿಯ ಸರಳ ಕಲಿಕೋಪಕರಣಗಳನ್ನು ಶ್ರವಣನ್ಯೂನತೆಯುಳ್ಳ ಮಕ್ಕಳ ಪೋಷಕರ ಸಂಘದ ವತಿಯಿಂದ  ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರಿಗೆ ಸಮರ್ಪಿಸಲಾಯಿತು. 

       ಕಲಿಕೋಪಕರಣಗಳನ್ನು  ಸ್ವೀಕರಿಸಿದ ಪೂಜ್ಯ ಶ್ರೀಗಳು ಮಕ್ಕಳ ಸಂತೋಷ,ಸಂಭ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಸಮಿತಿ ಸದಸ್ಯೆ ಹಾಗೂ ಶ್ರವಣನ್ಯೂನತೆಯುಳ್ಳ ಮಕ್ಕಳ ಪೋಷಕರ ಸಂಘದ ಗೌರವಾಧ್ಯಕ್ಷೆ  ಜಯಲಕ್ಷ್ಮೀ ಕಾರಂತ್, ಶಾಲಾ ಪ್ರಾಂಶುಪಾಲ ಪ್ರವಿಧ್ ಮತ್ತು ಸಂಘದ ಕಾರ್ಯದರ್ಶಿ, ವಿದ್ಯಾಪೀಠ ಶಿಶುವಾಟಿಕಾ ವಿಭಾಗದ ಅಧ್ಯಾಪಿಕೆ ತಾರಾಲತಾ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries