HEALTH TIPS

ರಾಜ್ಯ ಸರ್ಕಾರದ ಉಜ್ವಲ ಬಾಲ್ಯ ಪುರಸ್ಕಾರ ವಿ. ಮನ್ ಮೇಘನಿಗೆ

              ಕಣ್ಣೂರು: ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡುವ ಉಜ್ವಲ ಬಾಲ್ಯ ಪುರಸ್ಕಾರವನ್ನು ಸಿಎಚ್‍ಎಂ ಹೈಯರ್ ಸೆಕೆಂಡರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ವಿ.ಮನ್ ಮೇಘನಿಗೆ ಘೋಷಿಸಲಾಗಿದೆ. 12-18 ವರ್ಷದೊಳಗಿನ ಮಕ್ಕಳ ಸಾಮಾನ್ಯ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. 

            ಉಜ್ವಲ ಬಾಲ್ಯ ಪುರಸ್ಕಾರವು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ನೀಡುವ ಪ್ರಶಸ್ತಿಯಾಗಿದೆ. ಎತ್ತೂರಿನ ಅನಂತೋತ್ ಉಲ್ಲಾಸ್- ಡಾ. ಶಿನಿಮೋಳ್ ದಂಪತಿಗಳ ಪುತ್ರ. ವೈಜ್ಞಾನಿಕವಾಗಿ ಚಿತ್ರಕಲೆ ಅಧ್ಯಯನ ಮಾಡದಿದ್ದರೂ ಈ ಪುಟ್ಟ ಪ್ರತಿಭೆ ಈಗಾಗಲೇ ಐದು ಸಾವಿರಕ್ಕೂ ಹೆಚ್ಚು ವಿವಿಧ ಚಿತ್ರಗಳನ್ನು ಬಿಡಿಸಿದ್ದಾನೆ. ಕಣ್ಣೂರು ಜಿಲ್ಲೆಯ ವಿವಿಧೆಡೆ ಈಗಾಗಲೇ 13 ಬಾರಿ ಚಿತ್ರಗಳ ಪ್ರದರ್ಶನ ನಡೆದಿದೆ. ಮನ್ ಮೇಘ್ ಡೈನೋಸಾರ್‍ಗಳ ವಿವಿಧ ವರ್ಗಗಳನ್ನು ಅಧ್ಯಯನ ಮಾಡುತ್ತಿದ್ದಾನೆ. ಮತ್ತು ಪಿಪಿಟಿ ಪ್ರಸ್ತುತಿಗಳ ಮೂಲಕ ತರಗತಿಗಳನ್ನು ನಡೆಸುತ್ತಿದ್ದಾನೆ.  ವಿವಿಧ ಶಾಲೆಗಳಿಗೆ ಪ್ರಯಾಣಿಸುತ್ತಾರೆ ಮತ್ತು ತರಗತಿಗಳನ್ನು ತೆಗೆದುಕೊಳ್ಳುತ್ತಾನೆ. ಶಿಬಿರಗಳಲ್ಲಿ ತರಗತಿಗಳನ್ನು ಸಹ ನಡೆಸಲಾಗುತ್ತದೆ. ಮುಂಬರುವ ಶೈಕ್ಷಣಿಕ ವರ್ಷದ ಅಂಗವಾಗಿ ಸುಮಾರು ಹದಿನೈದು ಶಾಲೆಗಳಲ್ಲಿ ಈಗಾಗಲೇ ಗೋಡೆಯ ಮೇಲೆ ಚಿತ್ರ ಬಿಡಿಸಿದ್ದಾನೆ.

           ಮೊಟ್ಟಮೊದಲ ಬಾರಿಗೆ ಕೇರಳದಲ್ಲಿ ಡೈನೋಸಾರ್ ಚಿತ್ರಕಲೆ ಮತ್ತು ಶಿಲ್ಪಕಲಾ ಪ್ರದರ್ಶನವನ್ನು ಆಯೋಜಿಸಲಾಗಿದ್ದು 16 ಚದರ ಅಡಿ ವಿಸ್ತೀರ್ಣದಲ್ಲಿ ನೈಸರ್ಗಿಕ ಬಣ್ಣದಿಂದ ಡೈನೋಸಾರ್ ಚಿತ್ರ ಬಿಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ನಲ್ಲಿ ಸ್ಥಾನ ಪಡೆದಿದ್ದಾನೆ. ರಾಜೀವ್ ಗಾಂಧಿ ರಾಷ್ಟ್ರೀಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾನೆ. 

          ಕೇರಳ ಪೋಕ್ ಲೋರ್ ಅಕಾಡೆಮಿ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾನೆ . ರಾಜ್ಯ ಮಟ್ಟದ ಮಕ್ಕಳ ಚಿತ್ರ ಬರವಣಿಗೆ ಸ್ಪರ್ಧೆಯಲ್ಲಿ ಮಲಾರವಾಡಿ ಮಜವಿಲ್ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿದೆ. ಡೈನೋಸಾರ್ ಬಾಯ್ (ಮಲಯಾಳಂ ಕಥೆ) ಮತ್ತು ಎನ್ಚ್ಯಾಂಟೆಡ್ ಮೆಡಾಲಿಯನ್ (ಇಂಗ್ಲಿμï ಕಥೆ) ಲೇಖಕನೂ ಹೌದು. ಬಾಲ ಕಲಾವಿದರೇ ಮುಖಪುಟ ಸೇರಿದಂತೆ ಪುಸ್ತಕಗಳನ್ನು ವಿನ್ಯಾಸಗೊಳಿಸಿದ್ದಾರೆ. ಸಾಮಾನ್ಯ ಶಾಲಾ ಶಿಕ್ಷಣ ಪಡೆದಿರುವ ಮನ್ ಮೇಘ್ ಮೂರು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ.


              


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries