ಉಪ್ಪಳ: ಗಡಿನಾಡ ಸಾಂಸ್ಕøತಿಕ ಅಕಾಡಮಿ ಕಾಸರಗೋಡು ವತಿಯಿಂದ ಕನ್ನಡ ರಾಜ್ಯೋತ್ಸವ-2023 'ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಜರುಗಿತು.
ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಸಂಸದ, ಕೇಂದ್ರದ ಮಾಜಿ ಸಚಿವ ರಮೇಶ್ ಚಂದಪ್ಪ ಜಿಗಜಿಣಗಿ ಉದ್ಘಾಟಿಸಿದರು. ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯೀ ಆಶೀರ್ವಚನ ನೀಡಿದರು. ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪೈವಳಿಕೆ ಗ್ರಾಪಂ ಅಧ್ಯಕ್ಷೆ ಕೆ. ಜಯಂತಿ, ಡಾ. ಎಂ.ಪಿ ಶ್ರೀನಾಥ್, ಪೆಲ್ತಡ್ಕ ರಾಮಕೃಷ್ಣ ಭಟ್, ಅರಿಬೈಲು ಗೋಪಾಲ ಶೆಟ್ಟಿ, ವಾಮನ ರಾವ್ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು.
ಸಾಹಿತಿ ಕೆ.ಕೆ ಗಂಗಾಧರನ್, ಸಮಾಜಸೇವಕ ಎಂ. ಸಂಜೀವ ಶೆಟ್ಟಿ, ಆಯಿಷಾ ಕಾರ್ಕಳ, ಜಾನಪದ ಹಾಡುಗಾರ ಗೋ.ನಾ ಸ್ವಾಮಿ, ದಿವಾಕರ ಬಿ.ಶೆಟ್ಟಿ, ವಕೀಲ ಇಬ್ರಾಹಿಂ ಖಲೀಲ್ ಅರಿಮಲ, ರೂಪಾ ವರ್ಕಾಡಿ, ವಂದನಾ ರೈ ಕಾರ್ಕಳ, ವಾಸು ಬಾಯಾರ್ ಅವರಿಗೆ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪತ್ರಕರ್ತ ಇಬ್ರಾಹಿಂ ಅಡ್ಕಸ್ಥಳ, ಕೇರಳ ರಾಜ್ಯೋದಯ ಪ್ರಶಸ್ತಿ ಪುರಸ್ಕøತ ಶಂಕರ್ ಸ್ವಾಮಿಕೃಪಾ, ಶಶಿಕಲಾ ಪೂಂಜ ಮುಂಬೈ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಅಖಿಲೇಶ್ ನಗುಮುಗಂ ಸ್ವಾಗತಿಸಿದರು. ವಿದ್ಯಾಗಣೇಶ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ನಡೆದ ಸಾಂಸ್ಕøತಿಕ ಮೆರವಣಿಗೆಯನ್ನು ಕೊಚ್ಚಿ ಕನ್ನಡ ಸಂಘದ ಉಪಧ್ಯಕ್ಷ ಗಿರೀಶ್ ಪಡ್ಕೆ ಉದ್ಘಾಟಿಸಿದರು. ಸಾಹಿತಿ ಗುಣಾಜೆ ರಾಮಚಂದ್ರ ಭಟ್ ದೀಪ ಪ್ರಜ್ವಲಿಸಿದರು. ಲೇಖಕ ಪನೆಯಾಲ ವೆಂಕಟ್ರಮಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಚನಿಯಪ್ಪ ನಾಯ್ಕ್ ಸ್ವಾಗತಿಸಿದರು.