ಕಾಸರಗೋಡು: ಈ ಪ್ರಪಂಚದಲ್ಲಿ ಶ್ರವಣ ಸುಂದರವಾಗಿ ಹರಿಯುವ ಶಬ್ದವಾಗಿದೆ ಸಂಗೀತ. ತಾನು ಪ್ರಸಿದ್ಧ ಸಂಗೀತಜ್ಞನೆಂದು ಕರೆಸಿಕೊಂಡರೂ ಆ ಕ್ಷೇತ್ರದಲ್ಲಿ ಅಜ್ಞನೆಂದೇ ಹೇಳಿಕೊಳ್ಳಬೇಕು. ಸಂಗೀತ ಎನ್ನುವುದು ನಿರಂತರವಾದ ಒಂದು ಕಲಿಕಾ ಕ್ಷೇತ್ರವಾಗಿದೆ .ಪ್ರಪಂಚದಲ್ಲಿನ ಸ್ಪೋಟದಿಂದ ಗೃಹಾದಿಗಳು ಸೃಷ್ಟಿಯಾದಂತೆ ಆದಿ ಶಬ್ದವೇ ಓಂಕಾರ . ಎಂದು ಪ್ರಸಿದ್ಧ ಸಂಗೀತಜ್ಞನೂ ಕಲಾವಿದನೂ ಆದ ಕಾಞಂಗಾಡ್ ರಾಮಚಂದ್ರನ್ ಅಭಿಪ್ರಾಯಪಟ್ಟರು .
ಕಾಸರಗೋಡು ಚಿನ್ಮಯ ವಿದ್ಯಾಲಯದ 52ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಬಾಲ್ಯ ಜೀವನದ ಸಾಧನೆಗಳನ್ನು ಸ್ಮರಿಸುತ್ತಾ ತಮ್ಮೊಳಗೆ ಸುಪ್ತವಾಗಿದ್ದ ಕಲೆ ,ಸಂಗೀತವನ್ನು ಯಾರಿಂದಲೂ ತಡೆಹಿಡಿಯಲು ಸಾಧ್ಯವಿಲ್ಲ. ದೈವಾನುಗ್ರಹದಿಂದ ಅದು ಪ್ರಕಟಗೊಂಡೇ ತೀರುವುದು . ಎಂದು ಅಭಿಪ್ರಾಯ ಪಟ್ಟರು. ಯಾವುದೇ ಶಾಸ್ತ್ರಜ್ಞರು, ಸಂಶೋಧಕರು ತಮ್ಮ ಕೆಲಸಗಳಿಗೆ ಪ್ರೇರಣೆ ಎಂಬಂತೆ ಸಂಗೀತವನ್ನು ಹಾಗೂ ಸಂಗೀತೋಪಕರಣಗಳನ್ನು ನುಡಿಸುತ್ತಿದ್ದರೆಂದು ಕೇಳಿದ್ದೇವೆ. ಓ. ಎನ್.ವಿ ಕುರುಪ್ , ವಯಲಾರ್ ರಾಮವರ್ಮ, ಓಂ ಪುರಿ ಮೊದಲಾದ ಕಲಾವಿದರನ್ನು ಬಾಲ್ಯದಲ್ಲಿ ನಿರ್ಲಕ್ಷಿಸಲ್ಪಟ್ಟರೂ ದೊರೆತ ಅವಕಾಶವನ್ನು ಬಳಸಿಕೊಂಡು ಪ್ರಸಿದ್ಧರಾಗುತ್ತಲೇ ಹೋದರು. ಯಾರನ್ನು ನಿರ್ಲಕ್ಷಿಸಬಾರದು ಕಲೆ ಸಂಗೀತಕ್ಕೆ ಪ್ರೋತ್ಸಾಹ ನೀಡುವುದು ಅನಿವಾರ್ಯ ಎ0ದುರಾಮಚಂದ್ರ ಅಭಿಪ್ರಾಯಪಟ್ಟರು.
ಚಿನ್ಮಯ ಮಿಷನ್ ಕೇರಳ ರಾಜ್ಯದ ಮುಖ್ಯಸ್ಥ ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿ ಅವರು ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳ ಕಲಾ ಪ್ರತಿಭೆಯು ಅನಾವರಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಅತ್ಯಂತ ಪ್ರಸಿದ್ಧ ಕಲಾವಿದರಿಂದ ಇದು ಉದ್ಘಾಟನೆಗೊಳ್ಳುತ್ತಿರುವುದು ನಮ್ಮ ಸುಕೃತಿ. ಚಿನ್ಮಯ ವಿದ್ಯಾಲಯವು ವ್ಯತ್ಯಸ್ತವಾದ ಶಿಕ್ಷಣ ಕೇಂದ್ರವಾಗಿದೆ. ಸ್ವಾಮಿ ಚಿನ್ಮಯಾನಂದರ ಕನಸಿನ ಆಧಾರದಲ್ಲಿ ರೂಪುಗೊಳ್ಳುತ್ತಿರುವ ಪಠ್ಯ ಪದ್ಧತಿಯಲ್ಲಿ ಬೌದ್ಧಿಕ ವಿಕಾಸದೊಂದಿಗೆ ಮಾನಸಿಕ ವಿಕಾಸಕ್ಕೂ ಪ್ರಾಶಸ್ತ್ಯ ನೀಡಲಾಗುತ್ತಿದ್ದು ಜೀವನ ಮೌಲ್ಯಗಳನ್ನು ಪಠ್ಯಪದ್ಧತಿಯೊಂದಿಗೆ ಮಕ್ಕಳಿಗೆ ವರ್ಗಾಯಿಸುತ್ತ ದೇಶ ಪ್ರೇಮ, ಸಾರ್ವತ್ರಿಕವಾದ ದೃಷ್ಟಿಕೋನ ,ಭಾರತೀಯ ಸಂಸ್ಕøತಿಕ ಮೌಲ್ಯಗಳೊಂದಿಗೆ ಸರ್ವತೋಮುಖ ವಿಕಾಸವನ್ನು ರೂಪಿಸುವುದು ಇಲ್ಲಿನ ಕಲಿಕಾ ಉದ್ದೇಶವಾಗಿದೆ ಎಂದು ತಿಳಿಸಿದರು, ಹೆತ್ತವರು ಮಕ್ಕಳಿಗೆ ಪೆÇೀಷಕ ಆಹಾರ ವಸ್ತುಗಳನ್ನು ನೀಡಬೇಕು. ಮೊಬೈಲ್ ಫೆÇೀನ್ ಗಳಿಂದ ದೂರವಿರಿಸಲು ಹೆತ್ತವರು ಅವರೊಂದಿಗೆ ಹೆಚ್ಚಿನ ವೇಳೆಯನ್ನು ಕಳೆಯಬೇಕು ಎ0ದು ಕರೆಯಿತ್ತರು.
ವಿದ್ಯಾಲಯದ ಪ್ರಾಂಶುಪಾಲ ಸುನಿಲ್ ಕುಮಾರ್ ಕೆ.ಸಿ 2023 - 2024ರವಾರ್ಷಿಕ ವರದಿ ವಾಚನಗೈದರು. ಪಠ್ಯ - ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಉಪ ಪ್ರಾಂಶುಪಾಲರಾದ ಪ್ರಶಾಂತ್ ಬಿ ಸ್ವಾಗತಿಸಿ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ಎಸ್.ಆರ್ ವಂದಿಸಿದರು .ಬ್ರಹ್ಮಚಾರಿಣಿ ರೋಜಿಶ , ಸಿಂಧು ಶಶೀಂದ್ರನ್, ಕಾಸರಗೋಡು ಚಿನ್ಮಯ ಮಿಷನ್ ಅಧ್ಯಕ್ಷ ಶ್ರೀ ಎ.ಕೆ. ನಾಯರ್ ಸನ್ನಿಹಿತರಾಗಿದ್ದರು. "ವಸುದೈವ ಕುಟುಂಬಕಂ” ಎಂಬ ಆಶಯದೊಂದಿಗೆ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.