ಕಾಸರಗೋಡು: ನಗರದ ಕೂಡ್ಲು ಪಾಯಿಚ್ಚಾಲ್ ಚೈತನ್ಯ ಟ್ರಸ್ಟ್ (ರಿ)ನ ನೇತೃತ್ವದಲ್ಲಿ ಋಷಿಕ್ಷೇತ್ರ ಚೈತನ್ಯ ವಿದ್ಯಾಲಯ ವಠಾರದಲ್ಲಿ ನಿರ್ಮಿಸಿದ "ಶಾಂಭವಿ ಈಜುಕೊಳ" ಹಾಗೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗನುಗುಣವಾಗಿ ಜೀವನ ನೈಪುಣ್ಯಗಳನ್ನು ವಿದ್ಯಾರ್ಥಿದೆಸೆಯಿಂದಲೇ ಕರಗತಗೊಳಿಸಲು ನಿರ್ಮಿಸಲಾದ"ವಿಶ್ವಕರ್ಮ ನೈಪುಣ್ಯ ವಿಕಾಸ ಕೇಂದ್ರ"ವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿದರು.
ಚೈತನ್ಯಟ್ರಸ್ಟ್‍ನ ಅಧ್ಯಕ್ಷ ಇ.ಎಸ್ ಮಹಾಬಲೇಶ್ವರ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಚೈತನ್ಯ ಟ್ರಸ್ಟಿನ ಸ್ಥಾಪಕಾಧ್ಯಕ್ಷ, ಪ್ರಸಕ್ತ ಚೈತನ್ಯವಿದ್ಯಾಲಯದ ಪ್ರಬಂಧಕ ನಾಗೇಶ ಬಿ ಪ್ರಾಸ್ತಾವಿಕ ಭಾಷಣಮಾಡಿದರು. ಮುಂಬೈಯ ಖ್ಯಾತ ಉದ್ಯಮಿ ಕುಸುಮೋಧರ ಶೆಟ್ಟಿ, ವಿದ್ಯಾಭಾರತಿ ದಕ್ಷಿಣ ಕ್ಷೇತ್ರ ಶಿಶುವಾಟಿಕಾ ಪ್ರಮುಖ್ ಪಿ.ಕೆ ಕೃಷ್ಣದಾಸನ್, ಟ್ರಸ್ಟಿಗಳಾದ ವಗಣಪತಿ ಭಟ್ ಬಾಳಿಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿದ್ಯಾಲಯದ ಪ್ರಾಂಶುಪಾಲೆ ಪುಷ್ಪಲತಾ ಎಸ್.ಯಂ ಹಾಗು ಶಿಶುವಿಹಾರದ ಮುಖ್ಯಸ್ಥೆ ರೂಪ ಕೆ.ಪಿ ಉಪಸ್ಥಿತರಿದ್ದರು. ಚೈತನ್ಯವಿದ್ಯಾಲಯದ ಆಡಳಿತಾಧಿಕಾರಿ ರಮೇಶ ಕೆ ಸ್ವಾಗತಿಸಿದರು. ಚೈತನ್ಯ ಟ್ರಸ್ಟಿನ ಕಾರ್ಯದರ್ಶಿ ಮೋಹನ ಯಂ ವಂದಿಸಿದರು.