ಕಾಸರಗೋಡು: ನಗರದ ಎಸ್.ವಿ.ಟಿ.ರಸ್ತೆ ವಠಾರದಲ್ಲಿ ಈಶಾವಾಸ್ಯಂ ಎಂಬ ಹೆಸರಿನ ಹೋಂ ಸ್ಟೇಯ ಉದ್ಘಾಟನೆಯನ್ನು ಉಡುಪಿ ಪುತ್ತಿಗೆ ಮಠದ ಕಿರಿಯ ಯತಿ ಸುಶೀಂದ್ರ ತೀರ್ಥ ಸ್ವಾಮೀಜಿ ಲೋಕಾರ್ಪಣೆಗೈದರು. ಈ ಸಂದರ್ಭ ಆಶೀರ್ವಚನ ನೀಡಿದ ಅವರು, ಅಶನ, ವಸತಿ, ವಸನಗಳು ಮಾನವನಿಗೆ ಅನಿವಾರ್ಯ ಮಾತ್ರವಲ್ಲ, ಇದಸಂಸ್ಕøತಿಯ ಬೆಳವಣಿಗೆಗೂ ಪೂರಕವಾಗಲಿರುವುದಾಗಿ ತಿಳಿಸಿದರು.
ಪುತ್ತಿಗೆ ಮಠದ ಯೋಜನೆ ಕೋಟಿ ಗೀತಾ ಬರಹ ಯಜ್ಞ ಕುರಿತು ಮಾಹಿತಿ ನೀಡಿದ ಶ್ರೀಗಳು ಶಾಸ್ತ್ರಗಳು ಮೋಕ್ಷಕ್ಕೆ ಹಾದಿ ತೋರಬಲ್ಲುವಾದರೆ, ಭಗವದ್ಗೀತೆಯ ಮೂಲಕ ಇಹದಲ್ಲೂ, ಪರದಲ್ಲೂ ಗೆಲುವು ಕಾಣಲು ಸಾಧ್ಯ ಎಂದು ತಿಳಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು, ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಶ್ರೀಕಾಂತ್, ಜಿಲ್ಲಾ ಸಮಿತಿ ಅಧ್ಯಕ್ಷ ಕುಂಟಾರು ರವೀಶ ತಂತ್ರಿ, ದೆಹಲಿಯ ಶ್ರೀಕರ ಮುಖ್ಯ ಅತಿಥಿಯಾಗಿ ಭಾಗವಹಿಸಿ ದ್ದರು. ಎಸ್.ಎಂ.ಉಡುಪ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾಲೀಕ ರಾಮಪ್ರಸಾದ್ ಕಾಸರಗೋಡು ಪ್ರಾಸ್ತಾವಿಕ ಭಾಷಣ ಮಾಡಿದರು.