ಬದಿಯಡ್ಕ: ಕೇರಳ ರಾಜ್ಯ ಹಿರಿಯ ನಾಗರಿಕರ ವೇದಿಕೆ ಬದಿಯಡ್ಕ ಘಟಕದ ಆಶ್ರಯದಲ್ಲಿ ಸನ್ಮಾನ ಮತ್ತು ಕವಿಗೋಷ್ಠಿ ಶನಿವಾರ ನಡೆಯಿತು. ಬದಿಯಡ್ಕದ ಹಿರಿಯ ನಾಗರಿಕರ ಹಗಲು ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷ ಪೆರ್ಮುಖ ಈಶ್ವರ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯ ಕವಿ ಪತ್ರಕರ್ತ ಹಾಗೂ ಸಂಘಟಕ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರನ್ನು ಈ ಸಂದಭರ್Àದಲ್ಲಿ ಸನ್ಮಾನಿಸಲಾಯಿತು. ವೇದಿಕೆಯ ಉಪಾಧ್ಯಕ್ಷ ಪಿ.ಜಿ.ಚಂದ್ರಹಾಸ ರೈ, ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಶುಭಹಾರೈಸಿದರು.
ಕವಿಗೋಷ್ಠಿ :
ಖ್ಯಾತ ಕವಿ, ವ್ಯಂಗ್ಯಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ್ದರು. ನರಸಿಂಹ ಭಟ್ ಏತಡ್ಕ, ಜ್ಯೋತ್ಸ್ನಾ ಕಡಂದೇಲು, ಪ್ರಭಾವತಿ ಕೆದಿಲಾಯ, ಸುಶೀಲ ಪದ್ಯಾಣ, ಶಂಕರ ಸ್ವಾಮಿಕೃಪಾ,ವನಜಾಕ್ಷಿ ಚೆಂಬರಕಾನ, ಧನ್ಯಶ್ರೀ ಸರಳಿ, ಹಿತೇಶ್ ಕುಮಾರ್ ನೀರ್ಚಾಲು, ಚಂದ್ರಕಲಾ ನೀರಾಳ, ಆಶ್ರಯ ಎಸ್ ಬೇಳ, ತೃಷಾ ಕೋಟ್ಯಾನ್ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಅಭಿನಂದನಾ ಪತ್ರ ನೀಡಲಾಯಿತು. ಅಂಬೇಡ್ಕರ್ ವಿಚಾರವೇದಿಕೆಯ ಅಧ್ಯಕ್ಷ ರಾಮಪಟ್ಟಾಜೆ, ಕವಯಿತ್ರಿಯರಾದ ದಿವ್ಯಗಟ್ಟಿ ಪರಕ್ಕಿಲ, ಸುಗಂಧಿ ಮಠದಮೂಲೆ, ನಿವೃತ್ತ ಗ್ರಾಮಾಧಿಕಾರಿ ಕೃಷ್ಣ ದರ್ಭೆತ್ತಡ್ಕ ಉಪಸ್ಥಿತರಿದ್ದರು. ಸುಂದರ ಬಾರಡ್ಕ ಹಾಗೂ ಸುಜಾತ ಕನಿಯಾಲ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಕಾರ್ಯದರ್ಶಿ ಶಂಕರನಾರಾಯಣ ಸಂಪತ್ತಿಲ ವಂದಿಸಿದರು.