ಕಾಸರಗೋಡು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಚೇರಿ ಹಾಗೂ ಜಿಲ್ಲಾ ಐ.ಸಿ.ಡಿ.ಎಸ್ ಸೆಲ್ ವತಿಯಿಂದ ಆರೆಂಜ್ ದಿ ವಲ್ರ್ಡ್ ಅಭಿಯಾನದ ಭಾಗವಾಗಿ ಜಾಗೃತಿ ತರಗತಿ ಜರುಗಿತು. ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ನಡೆದ ಜಾಗೃತಿ ತರಗತಿಯನ್ನು ಜಿಲ್ಲಾ ಯೋಜನಾಧಿಕಾರಿ ಟಿ.ರಾಜೇಶ್ ಉದ್ಘಾಟಿಸಿದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿ.ಎಸ್.ಶಿಮ್ನಾ ಅಧ್ಯಕ್ಷತೆ ವಹಿಸಿದ್ದರು.
ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಎದುರಿಸಲಿರುವ ಕಾನೂನಿಗೆ ಸಂಬಂಧಿಸಿದಂತೆ ಜಾಗೃತಿ ತರಗತಿಯಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರು, ನೌಕರರು ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಸದಸ್ಯರು ಭಾಗವಹಿಸಿದರು. ಕಾರಡ್ಕ ಅಡಿಷನಲ್ ಸಿ.ಡಿ.ಪಿ.ಒ ಎಂ.ರಜನಿ ಮಾತನಾಡಿದರು. ಜಿಲ್ಲಾ ಮಟ್ಟದ ಐ.ಸಿ.ಡಿ.ಎಸ್ ಪೆÇ್ರೀಗ್ರಾಂ ಆಫೀಸರ್ ಸಿ.ಸುಧಾ ಸ್ವಾಗತಿಸಿದರು. ಸೀನಿಯರ್ ಸೂಪ್ರೆಂಡ್ ಅಮರನಾಥ ಭಾಸ್ಕರ್ ವಂದಿಸಿದರು. ವಕೀಲ ವಿನಯ್ ಮಂಗಾಟ್ ತರಗತಿ ನಡೆಸಿಕೊಟ್ಟರು.