ಹೇಗ್: ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಸಹಿತ 5 ದೇಶಗಳು ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ)ನ ತನಿಖೆಗೆ ಆಗ್ರಹಿಸಿವೆ ಎಂದು ಐಸಿಸಿ ಹೇಳಿದೆ.
ಹೇಗ್: ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಸಹಿತ 5 ದೇಶಗಳು ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ)ನ ತನಿಖೆಗೆ ಆಗ್ರಹಿಸಿವೆ ಎಂದು ಐಸಿಸಿ ಹೇಳಿದೆ.
ಐಸಿಸಿ ಸದಸ್ಯರಾದ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಬೊಲಿವಿಯಾ, ಕೊಮೊರೊಸ್ ಮತ್ತು ಜಿಬೌಟಿ ದೇಶಗಳು `ಫೆಲೆಸ್ತೀನ್ ದೇಶದಲ್ಲಿನ ಪರಿಸ್ಥಿತಿಯ ಬಗ್ಗೆ' ತನಿಖೆಗೆ ಆಗ್ರಹಿಸಿವೆ ಎಂದು ಐಸಿಸಿ ಮುಖ್ಯ ಪ್ರಾಸಿಕ್ಯೂಟರ್ ಕರೀಮ್ ಖಾನ್ ಹೇಳಿದ್ದಾರೆ.
2021ರ ಮಾರ್ಚ್‍ನಲ್ಲಿ ಆರಂಭವಾಗಿರುವ ಗಾಝಾ ಪಟ್ಟಿ ಮತ್ತು ಆಕ್ರಮಿತ ಪಶ್ಚಿಮದಂಡೆಯಲ್ಲಿನ ಘಟನೆಗಳ ತನಿಖೆಯು ಈಗ 2023ರ ಅಕ್ಟೋಬರ್ನಲ್ಲಿ ನಡೆದ ದಾಳಿ, ಹಿಂಸಾಚಾರದ ಉಲ್ಬಣದ ವಿಷಯಕ್ಕೂ ವಿಸ್ತರಿಸಿದೆ ಎಂದವರು ಹೇಳಿದ್ದಾರೆ.
ಗಾಝಾ ಮತ್ತು ಈಜಿಪ್ಟ್ ನಡುವಿನ ಮುಖ್ಯ ಗಡಿದಾಟು ಪ್ರದೇಶಕ್ಕೆ ತನ್ನ ತಂಡ ಇತ್ತೀಚೆಗೆ ನೀಡಿದ್ದ ಭೇಟಿಯ ಸಂದರ್ಭ ಯುದ್ಧಕ್ಕೆ ಸಂಬಂಧಿಸಿದ ಘಟನೆಗಳ ಮಹತ್ವದ ಪುರಾವೆಗಳನ್ನು ಸಂಗ್ರಹಿಸಿದೆ. ಮುಂದಿನ ದಿನಗಳಲ್ಲಿ ಫೆಲೆಸ್ತೀನ್ ಮತ್ತು ಇಸ್ರೇಲ್ ದೇಶಗಳಿಗೆ ಭೇಟಿನೀಡಿ ಸಂಘರ್ಷದಲ್ಲಿ ಬದುಕುಳಿದವರು, ನಾಗರಿಕ ಸಮಾಜ ಸಂಸ್ಥೆಗಳಿಂದ ಮಾಹಿತಿ ಸಂಗ್ರಹಿಸುವ ಪ್ರಯತ್ನ ಮುಂದುವರಿಸುತ್ತೇನೆ' ಎಂದವರು ಹೇಳಿದ್ದಾರೆ.