ಕಾಸರಗೋಡು: ಕೃಷಿ ಕಾರ್ಮಿಕರಿಗಿರುವ ವಿವಿಧ ಸವಲತ್ತುಗಳು ಮತ್ತು ಪಿಂಚಣಿಗಳನ್ನು ಕಸಿದುಕೊಳ್ಳುತ್ತಿರುವ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರದ ಕ್ರಮವನ್ನು ವಿರೋಧಿಸಿ ಕೃಷಿ ಕಾರ್ಮಿಕರ ಫೆಡರೇಶನ್(ಬಿಎಂಎಸ್)ವತಿಯಿಂದ ಕಾಸರಗೋಡು ನಗರಸಭಾ ಕಚೇರಿ ಎದುರು ಧರಣಿ ನಡೆಸಲಾಯಿತು. ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ ನಾಯರ್ ಧರಣಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಆರ್ಥಿಕ ಸಂಕಷ್ಟದಿಂದ ನಲುಗಿರುವ ಕೇರಳದಲ್ಲಿ ಕೃಷಿ ಕಾರ್ಮಿಕರನ್ನು ಸಂಪೂರ್ಣ ಕಡೆಗಣಿಸಲಾಗುತ್ತಿದೆ. ಪಿಂಚಣಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ. ಸರ್ಕಾರ ತಕ್ಷಣ ಎಚ್ಚೆತ್ತು ಕೃಷಿಕಾರ್ಮಿಕರ ಸವಲತ್ತು ಮರುಸ್ಥಾಪಿಸುವುದರ ಜತೆಗೆ ಸಕಾಲಕ್ಕೆ ಪಿಮಚಣಿ ಒದಗಿಸಿಕಡಬೇಕು ಎಂದು ಆಗ್ರಹಿಸಿದರು.
ಬಿಎಂಎಸ್ ಉಪಾಧ್ಯಕ್ಷ ಪುಷ್ಪರಾಜ್ ಕೊರಕೋಡ್ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾ ಉಪಾಧ್ಯಾಯ ಗೋವಿಂದನ್ ಮಡಿಕೈ, ಜಿಲ್ಲಾ ಜತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಪ್ರಾದೇಶಿಕ ಸಮಿತಿ ಅಧ್ಯಕ್ಷ ಬಾಲಕೃಷ್ಣನ್ ನೆಲ್ಲಿಕುಂಜೆ, ಕಾರ್ಯದರ್ಶಿ ರಿಜೇಶ್ ಜೆ.ಪಿ.ನಗರ, ಶಾಂತಕುಮಾರಿ ಜೆ.ಪಿ ನಗರ, ಶಿವಪ್ರಸಾದ್ ತಾಳಿಪಡ್ಪು, ಎಸ್.ಕೆ ಉಮೇಶ್ ರಂಜಿತ್. ಚೆರ್ಕಳ, ವೀಣಾ ನೆಲ್ಲಿಕುನ್ನು, ಉಪಸ್ಥಿತರಿದ್ದರು. ಪ್ರಾದೇಶಿಕ ಸಮಿತಿ ಜತೆ ಕಾರ್ಯದರ್ಶಿ ಬಾಬುಮೋನ್ ವಂದಿಸಿದರು.