ಕೊಟ್ಟಾಯಂ: ನಟ ವಿನೋದ್ ಥಾಮಸ್ ಸಾವಿಗೆ ಕಾರಣ ಹೊರಬಿದ್ದಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕಾರ್ಬನ್ ಮಾನಾಕ್ಸೈಡ್ ಇನ್ಹಲೇಷನ್ ನಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ.
ಕಾರನ್ನು ಸ್ಟಾರ್ಟ್ ಮಾಡಿದ ನಂತರ ವಿನೋದ್ ಕಾರಿನೊಳಗೆ ಎಸಿ ಹಾಕಿಕೊಂಡು ಕಿಟಕಿ ಲಾಕ್ ಮಾಡಿ ಕುಳಿತಿದ್ದರು. ಬಳಿಕ ನಿದ್ರೆಗೆ ಜಾರಿದಾಗ ವಿಷಾನಿಲ ಸೇವನೆಗೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ಊಹಿಸಲಾಗಿದೆ. ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ವಿನೋದ್ ಅವರ ಅಂತ್ಯಕ್ರಿಯೆ ಮಂಗಳವಾರ ಮುತ್ತಂಬಲಂ ಸಾರ್ವಜನಿಕ ಚಿತಾಗಾರದಲ್ಲಿ ನಡೆಯಲಿದೆ. ಕೊಟ್ಟಾಯಂನ ಪಂಪಾಡಿಯ ಬಾರ್ ಬಳಿ ನಿಲ್ಲಿಸಿದ್ದ ಕಾರಿನೊಳಗೆ ವಿನೋದ್ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ಹೋಟೆಲ್ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ನಂತರ ಪೋಲೀಸರು ಕಾರನ್ನು ಪರಿಶೀಲಿಸಿದರು. ಆದರೆ ಕಾರಿನಲ್ಲಿ ಅಸಹಜವಾದದ್ದೇನೂ ಕಂಡುಬಂದಿಲ್ಲ.
ಮೊನ್ನೆ ವಿನೋದ್ ಕಾರಿನಲ್ಲಿ ಹಲವು ಗಂಟೆಗಳ ಕಾಲ ಕುಳಿತಿದ್ದನ್ನು ಹೋಟೆಲ್ ಸಿಬ್ಬಂದಿ ನೋಡಿದ್ದರು. ನಿನ್ನೆ ಎರಡು ಗಂಟೆಯಿಂದ ಕಾರನ್ನು ಸ್ಟಾರ್ಟ್ ಮಾಡಿದ ನಟ ಕಾರಿನೊಳಗೆ ಕುಳಿತಿದ್ದರು. ಗಂಟೆ ಕಳೆದರೂ ವಿನೋದ್ ಕಾಣದಿದ್ದಾಗ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಬಳಿಕ ಕಾರಿನೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಡಿದರೂ ವಿನೋದ್ ಕಾರನ್ನು ತೆರೆಯಲಿಲ್ಲ. ಬಳಿಕ ಹೋಟೆಲ್ ಸಿಬ್ಬಂದಿ ಇತರರಿಗೆ ಮಾಹಿತಿ ನೀಡಿದ್ದಾರೆ. ಕಾರಿನ ಗಾಜು ಒಡೆದು ಹೊರ ತೆಗೆಯಲಾಗಿದೆ.