ಪತ್ತನಂತಿಟ್ಟ: ಪೆÇನ್ನಂಬಲ ಬೆಟ್ಟದ ಅಯ್ಯಪ್ಪ ಸ್ವಾಮಿ ದೇವರೆದುರು ಪೂಜಿಸಲಾಗಿದ್ದ ಕಲಶಕ್ಕೆ ಅಭಿμÉೀಕ ಮಾಡಿ ಪೂಜೆ ಸಲ್ಲಿಸುತ್ತಿದ್ದ ಪಿ.ಎನ್.ಮಹೇಶ್ ನಂಬೂದಿರಿ ಶಬರಿಮಲೆ ಧರ್ಮಶಾಸ್ತ ದೇವಾಲಯಕ್ಕೆ ಮುಂದಿನ ಒಂದು ವರ್ಷದ ಅವಧಿಗೆ ಅರ್ಚಕರಾಗಿ ಜವಾಬ್ದಾರಿ ವಹಿಸಿದರು.
ನಿನ್ನೆ ಸಂಜೆ ದೀಪ ಪೂಜೆ ಸಲ್ಲಿಸಿದ ನಂತರ ಮೇಲ್ಶಾಂತಿ ಪಟ್ಟಾಭಿμÉೀಕ ಕಾರ್ಯಕ್ರಮ ಆರಂಭವಾಯಿತು.
ಕಲಶಕ್ಕೆ ಅಭಿμÉೀಕ ಮಾಡಿದ ನಂತರ ಮೇಲ್ಶಾಂತಿಯನ್ನು ತಂತ್ರಿ ಕಂಠಾರರ್ ಮಹೇಶ್ವರ ಮೋಹನರ್ ದೇಗುಲಕ್ಕೆ ಹಸ್ತಾಂತರಿಸಲಾಯಿತು. ಅಯ್ಯಪ್ಪನ ಮೂಲಮಂತ್ರವನ್ನು ಕಿವಿಯಲ್ಲಿ ಪಠಿಸುವುದರೊಂದಿಗೆ ಅಯ್ಯಪ್ಪನ ಪೂಜೆಯ ಅನುಗ್ಯ ಸಮಾರಂಭವನ್ನು ಪೂರ್ಣಗೊಳಿಸಲಾಯಿತು. ನಂತರ ಮಾಳಿಗಪ್ಪುರಂ ದೇವಸ್ಥಾನದ ನೂತನ ಮುಖ್ಯಸ್ಥರಾಗಿ ಪಿ.ಜಿ.ಮುರಳಿ ನಂಬೂದಿರಿ ಪದಗ್ರಹಣ ಕಾರ್ಯಕ್ರಮವೂ ನಡೆಯಿತು.
ಅಯಪ್ಪ ದೇವಸ್ಥಾನದ ಮುಂಭಾಗ ನಡೆದ ಇದೇ ಸಮಾರಂಭದಲ್ಲಿ ಮುರಳಿ ನಂಬೂದಿರಿಯನ್ನು ಮಾಳಿಗಪ್ಪುರಂ ಮೇಲ್ಶಾಂತಿಯಾಗಿ ಜವಾಬ್ದಾರಿ ವಹಿಸಿದರು. ಮುಂದಿನ ಒಂದು ವರ್ಷ ಇಬ್ಬರೂ ಅರ್ಚಕರಾಗಿರುತ್ತಾರೆ.