ಉಪ್ಪಳ: ಮಂಗಲ್ಪಾಡಿ ಪಂಚಾಯಿತಿಯ ಪಚ್ಚಂಬಳ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಮಡಿರುವ ಬಗ್ಗೆ ವದಂತಿ ಹರಡಿದ್ದು, ಪಚ್ಚಂಬಳ ಕಾಂಡಲ್ ನಿವಾಸಿ ಅಬ್ದುಲ್ಲ ಬೇರಿಕೆ ಎಂಬವರ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಚಿರತೆಯನ್ನು ಹೋಲುವ ಪ್ರಾಣಿಯೊಂದು ಗೋಚರಿಸಿದ್ದು, ವದಂತಿಗೆ ಪುಷ್ಠಿ ನೀಡಿದೆ.
ಚಿರತೆ ಕಾನಿಸಿಕೊಂಡಿರುವ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯ ಮಜೀದ್ ಪಚ್ಚಂಬಳ ಅವರು ಪೊಲೀಸ್ ಹಾಗೂ ಗ್ರಾಮಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಹೆಜ್ಜೆಗುರುತು ಪತ್ತೆಹಚ್ಚುವ ಕಾರ್ಯ ನಡೆಸಲು ಮುಂದಾಗಿದ್ದಾರೆ. ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಸಿಸಿ ಕ್ಯಾಮರಾದಲ್ಲೂ ದೃಶ್ಯ ಸೆಯಾಗಿರುವುದರಿಂದ ನಾಗರಿಕರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ಜಿಲ್ಲೆಯ ನಾನಾ ಕಡೆ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ವದಂತಿ ಹರಡುತ್ತಿದ್ದರೂ, ಇದುವರೆಗೆ ಚಿರತೆ ಪತ್ತೆಯಾಗಿರಲಿಲ್ಲ.