ಎರ್ನಾಕುಳಂ: ಹೊಸ ಅಂಕಿಅಂಶಗಳ ಪ್ರಕಾರ ಕೇರಳವು ದೇಶದಲ್ಲಿ ಅತಿ ಹೆಚ್ಚು ಪಾಸ್ ಪೋರ್ಟ್ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ದೇಶದಲ್ಲಿ ಒಟ್ಟು 10.87 ಕೋಟಿ ಪಾಸ್ ಪೋರ್ಟ್‍ಗಳಿವೆ.
ಈ ಪೈಕಿ 1.12 ಕೋಟಿ ಜನರು ಕೇರಳದವರು. ಜನಸಂಖ್ಯೆಗೆ ಹೋಲಿಸಿದರೆ ರಾಜ್ಯ ಬಹಳ ಮುಂದಿದೆ.
2022 ರಲ್ಲಿ, ಗರಿಷ್ಠ ಸಂಖ್ಯೆಯ ಕೇರಳೀಯರು ಪಾಸ್ ಪೋರ್ಟ್‍ಗಳನ್ನು ಪಡೆದರು. ಕಳೆದ ವರ್ಷ 15.07 ಲಕ್ಷ ಮಂದಿ ಪಾಸ್ ಪೋರ್ಟ್ ಪಡೆದಿದ್ದಾರೆ. ಈ ವರ್ಷದ ಆಗಸ್ಟ್‍ವರೆಗಿನ ಅಂಕಿಅಂಶಗಳನ್ನು ಪರಿಶೀಲಿಸಿದರೆ, ಕೇರಳದಲ್ಲಿ 1.12 ಕೋಟಿ ಪಾಸ್ ಪೋರ್ಟ್‍ದಾರರಿದ್ದಾರೆ. ಮಹಾರಾಷ್ಟ್ರ 1.10 ಕೋಟಿ ಪಾಸ್ ಪೋರ್ಟ್‍ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಪಾಸ್ ಪೋರ್ಟ್ ಪಡೆಯುವ ವಿಧಾನಗಳನ್ನು ಸರಳಗೊಳಿಸಲಾಗಿದೆ ಮತ್ತು ವಿಳಂಬವನ್ನು ಕಡಿಮೆ ಮಾಡಲಾಗಿದೆ. 2014ರಲ್ಲಿ ಪಾಸ್ ಪೋರ್ಟ್ ಪಡೆಯಲು ಕನಿಷ್ಠ 21 ದಿನ ತೆಗೆದುಕೊಂಡಿದ್ದರೆ, 2023ರ ವೇಳೆಗೆ ಆರು ದಿನಗಳಿಗೆ ಇಳಿಕೆಯಾಗಿದೆ. ಕೇರಳದಿಂದ ಹೊರರಾಜ್ಯಗಳಿಗೆ ವ್ಯಾಸಂಗಗೈಯ್ಯಲು ತೆರಳುವ ವಿದ್ಯಾರ್ಥಿಗಳ ಸಂಖ್ಯೆಯೂ ಘಾತೀಯವಾಗಿ ಹೆಚ್ಚಿದೆ. ಈ ವರ್ಷ ಇಲ್ಲಿಯವರೆಗೆ 40,000 ಕೇರಳೀಯರು ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಿದ್ದಾರೆ ಎಂದು ಅಂದಾಜಿಸಲಾಗಿದೆ.