ಮಂಜೇಶ್ವರ: ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯ ಸರ್ಕಾರ ಮುನ್ನಡೆಸುವ ನವಕೇರಳ ಯಾತ್ರೆ ಎಡರಂಗದ ಕೊನೆಯ ಯಾತ್ರೆಯಾಗಿದೆ. ಅಲ್ಪತನ ಮತ್ತು ಜಂಬದ ಪರಮಾವಧಿಯಾಗಿದ್ದು, ದೇಶದ ಕೊನೆಯ ಕಮ್ಯುನಿಸ್ಟ್ ಆಡಳಿತ ಕ್ಕೆ ನಾಂದಿ ಹಾಡಲಿದೆ ಎಂದು ಯುವಮೋರ್ಚಾ ರಾಜ್ಯ ಅಧ್ಯಕ್ಷ ಪ್ರಪುಲ್ ಕೃಷ್ಣ ಹೇಳಿದರು.
ಮಜೀರ್ ಪಳ್ಳ ಪೇಟೆಯಲ್ಲಿ ವರ್ಕಾಡಿ ಬಿಜೆಪಿ ಸಂಘಟಿಸಿದ್ದ ಜನ ಪಂಚಾಯತ್ ಸಾರ್ವಜನಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಬಿಡಿಗಾಸು ನೀಡದ ಕೇರಳ ರಾಜ್ಯದ ಮುಖ್ಯಮಂತ್ರಿ ಹೆದ್ದಾರಿ ಕಾಮಗಾರಿ ಪರಿಶೀಲನೆ ಮಾಡಲು 1.5 ಕೋಟಿಯ ಬಸ್ಸಲ್ಲಿ ಬಂದು ನಾಟಕ ಮಾಡುವ ಬದಲು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲ್ಲಿ ಎಂದು ಅಗ್ರಹಿಸಿದರು.
ಮಂಜೇಶ್ವರ ಶಾಸಕರು ಮಂಜೇಶ್ವರಕ್ಕೆ ಶಾಪ. ಅವರು ಇಲ್ಲಿಯ ಶಾಸಕ ಅಲ್ಲ ದುಬೈಯ ಶಾಸಕ. ತಿಂಗಳಲ್ಲಿ 15ದಿನ ವಿದೇಶದಲ್ಲಿ ಅವರಿಗೆ ಏನು ಕೆಲಸ ಎಂದು ಅವರು ಪ್ರಶ್ನೆಸಿದರು.
ದೂಮಪ್ಪ ಶೆಟ್ಟಿ ತಮಾರ್ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಕೇಂದ್ರ ಸÀರ್ಕಾರದ ಯೋಜನೆಗಳ ಸಮಗ್ರ ಮಾಹಿತಿ ನೀಡಿದರು.
ಮಣಿಕಂಠ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಅಶ್ವಿನಿ ಎಂ ಎಲ್, ಹರಿಶ್ಚಂದ್ರ ಮಂಜೇಶ್ವರ, ವಿಜಯ್ ರೈ, ತುಳಸಿ ಕುಮಾರಿ, ರವಿ ಮುಡಿಮಾರ್, ಕೃಷ್ಣ, ಯತೀರಾಜ್ ಶೆಟ್ಟಿ, ಎ.ಕೆ. ಕಯ್ಯಾರು, ಸಂಪತ್, ಸುಬ್ರಮಣ್ಯ ಭಟ್,ಸಂತೋಷ್ ದೈಗೋಳಿ,ಕೆ.ವಿ. ಭಟ್, ಚಂದ್ರಹಾಸ ಕಡಂಬಾರ್, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಭಾಸ್ಕರ ಪೊಯ್ಯೆ ಸ್ವಾಗತಿಸಿ, ರಕ್ಷಣ್ ಅಡಕಳ ವಂದಿಸಿದರು.