ಎರ್ನಾಕುಳಂ: ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರವಾಗಿದೆ ಎಂದು ಸರ್ಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ. ರಾಜ್ಯ ಸರ್ಕಾರ ಭಾರೀ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ ಎಂದು ಹೈಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದೆ.
ಕೆಟಿಡಿಎಫ್ ಸಿಯ ಆರ್ಥಿಕ ಹೊಣೆಗಾರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸರ್ಕಾರ ಈ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ಈ ಅರ್ಜಿಯನ್ನು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ನಿನ್ನೆ ವಿಚಾರಣೆ ನಡೆಸಿದರು. ಸರ್ಕಾರ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಹೇಳುತ್ತಿದೆಯೇ ಮತ್ತು ಅದು ಸಂವಿಧಾನವನ್ನು ಓದಿದೆಯೇ ಎಂದು ನ್ಯಾಯಾಲಯವು ಕೇಳಿದೆ. ಹೆಚ್ಚುವರಿ ಅಫಿಡವಿಟ್ ಸಲ್ಲಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಹತ್ತು ದಿನಗಳ ನಂತರ ಅರ್ಜಿಯನ್ನು ಮತ್ತೊಮ್ಮೆ ಪರಿಗಣಿಸಲಾಗುವುದು.
ಕೋಲ್ಕತ್ತಾ ಮೂಲದ ಲಕ್ಷ್ಮಿ ನಾಥ್ ಟ್ರೇಡ್ ಲಿಂಕ್ಸ್ ಈ ಅರ್ಜಿ ಸಲ್ಲಿಸಿದೆ. ಸÀರ್ಕಾರದ ಗ್ಯಾರಂಟಿಯಲ್ಲಿ ಹೂಡಿದ ಹಣ ವಾಪಸ್ ಬಂದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಕೆಟಿಡಿಎಫ್ ಮುಚ್ಚುವ ಹಂತದಲ್ಲಿದೆ.
ಹೂಡಿಕೆದಾರರು ಗುಂಪು ಗುಂಪಾಗಿ ಬಂದರೂ ಸಾರ್ವಜನಿಕ ವಲಯದ ಸಂಸ್ಥೆಗಳು ಹಣವನ್ನು ಮರುಪಾವತಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿವೆ. ಸರ್ಕಾರದ ಅಧೀನದಲ್ಲಿರುವ ಸಂಸ್ಥೆ ಎಂದು ನಂಬಿಸಿ ಕೋಟಿಗಟ್ಟಲೆ ಹೂಡಿಕೆ ಮಾಡಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೂಡಿಕೆ ಅವಧಿ ಮುಗಿದರೂ ಹಣ ವಾಪಸ್ ಬರದ ಪರಿಸ್ಥಿತಿ. ಇದು ಸಂಸ್ಥೆಯನ್ನು ಮುಚ್ಚಲು ಕಾರಣವಾಯಿತು ಎಂದು ಹೇಳಲಾಗಿದೆ.