ಕೋಝಿಕ್ಕೋಡ್: ಪತ್ರಕರ್ತರ ದೂರಿನ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಸುರೇಶ್ ಗೋಪಿಗೆ ನೋಟಿಸ್ ಕಳುಹಿಸದಿರಲು ಪೋಲೀಸರು ನಿರ್ಧರಿಸಿದ್ದಾರೆ.
ಸುರೇಶ್ ಗೋಪಿ ವಿರುದ್ಧದ ದೂರಿನಲ್ಲಿ ಯಾವುದೇ ಹುರುಳಿಲ್ಲ ಮತ್ತು ಪ್ರಾಥಮಿಕವಾಗಿ ಸುರೇಶ್ ಗೋಪಿ ಲೈಂಗಿಕ ದೌರ್ಜನ್ಯ ವಿಭಾಗದ ಅಡಿಯಲ್ಲಿ ಅಪರಾಧ ಮಾಡಿಲ್ಲ ಎಂದು ಪೋಲೀಸರು ಕಂಡುಕೊಂಡಿದ್ದಾರೆ.
ಪತ್ರಕರ್ತರ ದೂರಿನ ಮೇರೆಗೆ ಸುರೇಶ್ ಗೋಪಿ ವಿರುದ್ಧ ಸೆಕ್ಷನ್ 354ಎ (ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸುರೇಶ್ ಗೋಪಿ ಅಂತಹ ಯಾವುದೇ ಅಪರಾಧ ಮಾಡಿಲ್ಲ ಎಂದು ಪೋಲೀಸರು ತೀರ್ಮಾನಿಸಿದ್ದಾರೆ. ಇತರ ವಿಷಯಗಳನ್ನು ನೇರವಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವುದು ಪೋಲೀಸರು ನಿರ್ಧಾರ ಕೈಗೊಂಡಿದ್ದಾರೆ.
ಬುಧವಾರ ಸುರೇಶ್ ಗೋಪಿ ಪೆÇಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು. 2 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ಬಳಿಕ ಸುರೇಶ್ ಗೋಪಿ ಅವರನ್ನು ಬಿಡುಗಡೆ ಮಾಡಲಾಗಿದೆ. ತನಿಖಾಧಿಕಾರಿಗಳು ಕೇಳಿದಾಗ ಹಾಜರಿರಬೇಕು ಎಂದೂ ನಿರ್ದೇಶನ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ವಿವಾದಾತ್ಮಕ ಘಟನೆ ಅಕ್ಟೋಬರ್ 27 ರಂದು ನಡೆದಿತ್ತು.
ಪತ್ರಕರ್ತೆಯೊಂದಿಗೆ ಮಾತನಾಡುವಾಗ ಸುರೇಶ್ ಗೋಪಿ ಭುಜಕ್ಕೆ ಕೈಹಾಕಿದ್ದಾರೆ ಎಂದು ಪತ್ರಕರ್ತರು ಆರೋಪಿಸಿದ್ದಾರೆ. ಒಂದು ವೇಳೆ ಹಾಜರಾಗುವಂತೆ ನೋಟಿಸ್ ನೀಡಿದರೆ ಮತ್ತೊಮ್ಮೆ ಹಾಜರಾಗುವುದಾಗಿ ಸುರೇಶ್ ಗೋಪಿ ಪರ ವಕೀಲರು ಹೇಳಿಕೆ ನೀಡಿದ್ದರು.