ಸಮರಸ ಚಿತ್ರಸುದ್ದಿ: ಪೆರ್ಲ: ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭ ನಡೆಯಲಿರುವ ಶ್ರೀವಿಷ್ಣುಮೂರ್ತಿ ಒತ್ತೆಕೋಲ ಮಹೋತ್ಸವಕ್ಕಾಗಿ ಕೊಳ್ಳಿ ಮುಹೂರ್ತ ಭಾನುವಾರ ನೆರವೇರಿತು. ದೇವಸ್ಥಾನ ಆಡಳಿತ ಸಮಿತಿ ಪದಾಧಿಕಾರಿಗಳು, ಊರ ಪ್ರಮುಖರು ಉಪಸ್ಥಿತರಿದ್ದರು. 2024 ಫೆ. 1ರಿಂದ 5ರ ವರೆಗೆ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವ ನಡೆಯಲಿದ್ದು, 4ರಂದು ಕಟ್ಟಿಗೆಯೇರಿಸಿ, 5ರಂದು ನಸುಕಿಗೆ ಶ್ರೀ ವಿಷ್ಣುಮೂರ್ತಿ ಕೆಂಡಸೇವೆ ಜರುಗಲಿರುವುದು.