ಸಮರಸ ಚಿತ್ರಸುದ್ದಿ: ಬದಿಯಡ್ಕ: ಇತ್ತೀಚೆಗೆ ಪೇರಾಲು ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಹೈಸ್ಕೂಲ್ ವಿಭಾಗದ, ಸಂಸ್ಕøತ ಗಾನಾಲಾಪನ ಮತ್ತು ಲಲಿತಗಾನ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ಅಷ್ಟಪದಿಯಲ್ಲಿ "ಎ" ಗ್ರೇಡ್ ಗಳಿಸಿದ ಪ್ರದ್ಯುಮ್ನ ಶರ್ಮಾ, ಉಪ್ಪಂಗಳ. ಈತ ಬದಿಯಡ್ಕ ನವಜೀವನ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಸಂಗೀತ ಅಧ್ಯಾಪಿಕೆ ವಿದುಷಿ ವಾಣಿ ಪ್ರಸಾದ್ ಕಬೆಕ್ಕೋಡು ಇವರ ಶಿಷ್ಯ. ಆರ್ಥಿಕ ತಜ್ಞ, ಸಾಹಿತಿ ರಂಗ ಶರ್ಮಾ ಉಪ್ಪಂಗಳ- ಸ್ಮಿತಾ ದಂಪತಿ ಪುತ್ರ.