HEALTH TIPS

ಎಲ್ಲ ಕಾರ್ಮಿಕರನ್ನು ಹೊರ ಕಳುಹಿಸಿದ ಮೇಲೆಯೇ ವಾಪಸ್ ಬಂದ ರ್‍ಯಾಟ್‌ ಹೋಲ್ ಪರಿಣಿತರು

              ತ್ತರಕಾಶಿ: ಸಿಲ್ಕ್ಯಾರಾ ಸುರಂಗದಲ್ಲಿ 17 ದಿನ ಸಿಲುಕಿದ್ದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ರಕ್ಷಣಾ ಪಡೆಗಳ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

                ಭಾರಿ ಯಂತ್ರಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸುವ ಯೋಜನೆ ಕೊನೆ ಹಂತದಲ್ಲಿ ಕೈ ಕೊಟ್ಟಿದ್ದರಿಂದ ಇಲಿ ಬಿಲ ಸುರಂಗ ಪರಿಣತರಿಂದ (Rat Hole Mining) ಸುರಂಗ ಕೊರೆದು 41 ಕಾರ್ಮಿಕರನ್ನು ಹೊರ ತರಲಾಯಿತು.

               ವಿಶೇಷವೆಂದರೆ ಕಾರ್ಮಿಕರನ್ನು ಕರೆತರಲು ಹೋಗಿದ್ದ ಇಲಿ ಬಿಲ ಸುರಂಗ ಪರಿಣಿತ ಮೂವರು, ಎಲ್ಲ ಕಾರ್ಮಿಕರನ್ನು ಹೊರ ಕಳುಹಿಸಿದ ಮೇಲೆಯೆ ಎನ್‌ಡಿಆರ್‌ಎಫ್ ಸಿಬ್ಬಂದಿ ಜೊತೆ ಹೊರ ಬಂದಿದ್ದಾರೆ.

                  ಕಾರ್ಯಾಚರಣೆ ಮುಗಿದ ನಂತರ ಪಿಟಿಐ ಸುದ್ದಿಸಂಸ್ಥೆ ಜೊತೆ ಮಾಹಿತಿ ಹಂಚಿಕೊಂಡಿರುವ ಇಲಿ ಬಿಲ ಪರಿಣಿತ ದೆಹಲಿಯ ಖಜೂರಿ ಖಾಸ್‌ ಪ್ರದೇಶದ ಫೈರೂಜ್ ಖುರೇಶಿ ಹಾಗೂ ಉತ್ತರಪ್ರದೇಶದ ಬುಲಂದ್‌ಶಹರ್‌ನ ಮೋನು ಕುಮಾರ್, 'ಕೊನೆ ಹಂತದಲ್ಲಿ ನಾವು ಸುರಂಗ ಕೊರೆದು ಒಳ ಹೋದಾಗ ಕಾರ್ಮಿಕರು ನಮ್ಮನ್ನು ಹೆಗಲ ಮೇಲೆ ಹೊತ್ತು ಕುಣಿದರು' ಎಂದು ಸಂತಸದಿಂದ ಹೇಳಿದರು.

                  ನಾನು ಒಳ ಹೋದ ನಂತರ ತೀವ್ರ ಸಂತಸ ವ್ಯಕ್ತಪಡಿಸಿದ ಕಾರ್ಮಿಕರು ನನಗೆ ತಕ್ಷಣವೇ ನೀರು ಹಾಗೂ ಬಾದಾಮಿ ಬೀಜಗಳನ್ನು ನೀಡಿ ಉಪಚರಿಸಿದರು. ನಂತರ ಮೋನು ಕುಮಾರ್ ಹಾಗೂ ದೇವೇಂದ್ರ ಬಂದರು. ಆ ನಂತರ ಎನ್‌ಡಿಆರ್‌ಎಫ್ ಸೈನಿಕರು ಬಂದರು. ಕಾರ್ಮಿಕರನ್ನೆಲ್ಲ ಹೊರ ಕಳುಹಿಸದ ಮೇಲೆಯೇ ನಾವು ಎಡಿಆರ್‌ಎಫ್ ಅವರ ಜೊತೆ ಹಂತ ಹಂತವಾಗಿ ಹೊರ ಬಂದೆವು ಎಂದು ಹೇಳಿದರು.

                   ಈ ಐತಿಹಾಸಿಕ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದ್ದಕ್ಕೆ ನನಗೆ ತೀವ್ರ ಸಂತಸವಾಗಿದೆ ಎಂದು ಮೋನು ಕುಮಾರ್ ಹೇಳಿದ್ದಾರೆ. ರ್‍ಯಾಟ್‌-ಹೋಲ್ ಮೈನಿಂಗ್ ತಂಡದಲ್ಲಿ ಒಟ್ಟು 24 ಪರಿಣಿತರಿದ್ದರು.

                         ಫೈರೂಜ್ ಖುರೇಶಿ, ಮೋನು ಕುಮಾರ್ ಹಾಗೂ ದೇವೇಂದ್ರ ಅವರು ದೆಹಲಿಯ Rockwell Enterprises ಕಂಪನಿಯ ಕಾರ್ಮಿಕರಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries