ಕುಂಬಳೆ :ಕುಂಬಳೆ ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಸಂಘದ ಆಶ್ರಯದಲ್ಲಿ ಡಿಸೆಂಬರ್ 17 ರಂದು ಶೇಡಿಕಾವು ಶ್ರೀ ಶಂಕರನಾರಾಯಣ ದೇವಸ್ಥಾನ ವಠಾರದಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಹಿತ ಶ್ರೀ ಶನೈಶ್ಚರ ಮಹಾತ್ಮೆ ಎಂಬ ವಿಶಿಷ್ಟ ತುಳು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಶೇಡಿಕಾವು ದೇವಸ್ಥಾನದಲ್ಲಿ ಜರುಗಿತು.
ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಅಡಿಗ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿದರು. ಈ ಸಂದರ್ಭ ಯಕ್ಷಗಾನ ಸಂಘದ ಅಧ್ಯಕ್ಕ ಅಶೋಕ ಕುಂಬ್ಳೆ, ಸದಸ್ಯರಾದ ಹವ್ಯಾಸಿ ಕಲಾವಿದ ಗೋಪಾಲಕೃಷ್ಣ ನಾಯಕ್ ಸೂರಂಬೈಲು, ಈಶ್ವರ ಕುಮಾರ್ ಮಂಗಳೂರು, ಮುರಳೀಧರ ಶೇಡಿಗುಮ್ಮೆ, ವಸಂತ ಆರಿಕ್ಕಾಡಿ, ರವಿರಾಜ ಉಜ್ರೆಕೆರೆ, ಮುರುಗೇಶ್, ಸುಜನಾ ಶಾಂತಿಪಳ್ಳ, ದೀಕ್ಷಿತಾ ಕಂಚಿಕಟ್ಟೆ, ಮುರಳೀಧರ ಶೇಡಿಕಾವು, ಕೇಶವ ಶಾಂತಿಪಳ್ಳ, ಆನಂದ ಆಚಾರ್ಯ ಶೇಡಿಗುಮ್ಮೆ, ವಿಜಯ, ಗೌರೀಶ ಶೇಡಿಕಾವು ಮತ್ತು ಗೋಪಾಲಕೃಷ್ಣ ಅಡಿಗ ಉಪಸ್ಥಿತರಿದ್ದರು.