ಕೊಚ್ಚಿ: ಕೊಚ್ಚಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದಲ್ಲಿ(ಕುಸಾಟ್) ಟೆಕ್ ಫೆಸ್ಟ್ ವೇಳೆ ಸಂಭವಿಸಿದ ಅವಘಡ ಮಳೆಯ ಪರಿಣಾಮ ಎಂದು ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ಹೇಳಿದ್ದಾರೆ.
ಘಟನೆಯ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ ಮತ್ತು ಘಟನೆ ನಡೆದಾಗ ಪೋಲೀಸರು ಸ್ಥಳದಲ್ಲಿ ಇದ್ದರು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು. ಕಾರ್ಯಕ್ರಮದ ಸ್ವಯಂಸೇವಕರು ವಿದ್ಯಾರ್ಥಿಗಳೇ ಆಗಿದ್ದರು.
ಗೀತೋತ್ಸವಕ್ಕೆ ಪ್ರವೇಶ ನಿರ್ಬಂಧಿಸಿ ಗೇಟ್ ಬಂದ್ ಮಾಡಲಾಗಿತ್ತು. ಮಳೆ ಬಂದಿದ್ದರಿಂದ ಇಲ್ಲಿಗೆ ಜನ ಮುಗಿಬಿದ್ದಿದ್ದು ಅವಘಡಕ್ಕೆ ಕಾರಣ. ಹಿಂದಿನಿಂದ ತಳ್ಳಿದ ಪರಿಣಾಮ, ಮುಂದೆ ಇದ್ದವರು ಮೆಟ್ಟಿಲುಗಳ ಮೇಲೆ ಬಿದ್ದರು. ಅವರ ಹಿಂದೆ ಇದ್ದವರೂ ಅವರ ಮೇಲೆ ಬಿದ್ದರು. ಪ್ರವೇಶವನ್ನು ನಿಯಂತ್ರಿಸಲು ಗೇಟ್ ಮುಚ್ಚಿದ್ದೇ ಅಪಘಾತಕ್ಕೆ ಕಾರಣ. ಸಭಾಂಗಣದಲ್ಲಿ 1000 ರಿಂದ 1500 ಮಂದಿ ಕೂರಬಹುದಾದರೂ ಅದು ಭರ್ತಿಯಾಗಿರಲಿಲ್ಲ ಎಂದು ಎಡಿಜಿಪಿ ಹೇಳಿರುವರು.
ಬಾಲಿವುಡ್ ಗಾಯಕಿ ನಿಕಿತಾ ಗಾಂಧಿ ಅವರ ಹಾಡಿನ ಹಬ್ಬ ನಡೆಯುತ್ತಿರುವಾಗ ಈ ಅವಘಡ ಸಂಭವಿಸಿದೆ. ಮೃತರನ್ನು ಕೂತಟ್ಟುಕುಲಂ ನಿವಾಸಿ ಎರಡನೇ ವರ್ಷ ಪದವಿಯ ವಿದ್ಯಾರ್ಥಿಗಳಾದ ತುಲ್ ತಂಬಿ, ಉತ್ತರ ಪರವೂರ್ ನ ಆನ್ ರುಫ್ತಾ ಮತ್ತು ತಾಮರಸ್ಸೆರಿಯ ಕೊರಂಗಡ್ ನ ಸಾರಾ ಥಾಮಸ್ ಎಂದು ಗುರುತಿಸಲಾಗಿದೆ. ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. 51 ಮಂದಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.