HEALTH TIPS

ಕಾಸರಗೋಡಿನ ತನ್ನತನ ಅಭಿವ್ಯಕ್ತಿಸುವಲ್ಲಿ ಕಲಾಪ್ರಕಾರಗಳ ಪಾತ್ರ ಮಹತ್ವದ್ದು-ಡಾ.ಸುಜಿತ್‍ಕುಮಾರ್

 

           

                   ಕಾಸರಗೋಡು: ಜಿಲ್ಲೆಯ ಪಾರಂಪರಿಕ ಮತ್ತು ಆಧುನಿಕ ಕಲೆಯ ಪ್ರಕಾರಗಳು ಕಾಸರಗೋಡಿನ ತನ್ನತನವನ್ನು ಅಭಿವ್ಯಕ್ತಿಸುತ್ತವೆ ಎಂಬುದಾಗಿ ತೆಲಂಗಾಣದ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಸುಜಿತ್ ಕುಮಾರ್ ಪಾರಯಿಲ್ ಅವರು ನುಡಿದರು. 

              ಅವರು ಕಾಸರಗೋಡು ಸರ್ಕಾರಿ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಆಶ್ರಯದಲ್ಲಿ `ಕಾಸರಗೋಡಿನ ಸಾಂಸ್ಕøತಿಕ ವೈವಿಧ್ಯ' ಎಂಬ ವಿಷಯದಲ್ಲಿ ನಡೆದ ಮೂರು ದಿವಸಗಳ ಅಂತಾರಾಷ್ಟ್ರೀಯ ವಿಚಾರಸಂಕಿರಣದಲ್ಲಿ `ಕಾಸರಗೋಡು: ಸಾಂಸ್ಕøತಿಕ ಅವಕಾಶ- ಮಾಧ್ಯಮ ಮತ್ತು ದೃಶ್ಯ ಭಾಷೆ' ಎಂಬ ವಿಷಯದಲ್ಲಿ ಪ್ರಬಂಧವನ್ನು ಮಂಡಿಸಿ ಮಾತನಾಡಿದರು. 

             ಆಧುನಿಕ ಮಾಧ್ಯಮಗಳಾದ ಚಲನಚಿತ್ರಗಳು ಕೂಡ ಇಲ್ಲಿನ ಭಾಷೆ ಮತ್ತು ಸಂಸ್ಕøತಿಯನ್ನು ಕಲೆಯ ಉತ್ಪನ್ನವಾಗಿ ಬಳಸಿಕೊಳ್ಳುತ್ತಿವೆ. ಕನ್ನಡ, ಮಲಯಾಳ ಮತ್ತು ತುಳು ಸಿನಿಮಾಗಳಲ್ಲಿ ಕಾಸರಗೋಡಿನ ಭಾಷೆ ಮತ್ತು ಸಂಸ್ಕøತಿಗಳು ಸಮರ್ಥವಾಗಿ ಅನಾವರಣಗೊಳ್ಳುತ್ತಿವೆ ಎಂದು ತಿಳಿಸಿದರು.

                ಕಾಸರಗೋಡಿನ ವಾಸ್ತುಶಿಲ್ಪದ ಸೌಂದರ್ಯ ಮೀಮಾಂಸೆ ಎಂಬ ವಿಷಯದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಬಾಲಕೃಷ್ಣ ಹೊಸಂಗಡಿ ಪ್ರಬಂಧ ಮಂಡಿಸಿ ಮಾತನಾಡಿ, ಕಾಸರಗೋಡಿನಲ್ಲಿ ಅನೇಕ ಕೋಟೆಗಳಿದ್ದು, ಇವುಗಳಲ್ಲಿ ಕೇರಳ ಮತ್ತು ಕರ್ನಾಟಕದ ವಾಸ್ತುಶಿಲ್ಪದ ಚಹರೆಗಳನ್ನು ಗುರುತಿಸಬಹುದಾಗಿದೆ.

ಕಾಸರಗೋಡಿನ ದೇವಾಲಯ, ಮಸೀದಿ, ಇಗರ್ಜಿ, ಬಸದಿಗಳಲ್ಲಿ ಹಿಂದೂ, ಅರೆಬಿಕ್, ರೋಮನ್, ಜೈನ ವಾಸ್ತುಶಿಲ್ಪದ ಮಾದರಿಗಳನ್ನು ಕಾಣಬಹುದು. ಕಾಸರಗೋಡಿನ ವಾಸ್ತುಶಿಲ್ಪದ ಎರಡು ಮಾದರಿಗಳಿಗೆ ಇಲ್ಲಿನ ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ಬಳಕೆಯಾಗುವ ರಥ ಮತ್ತು ಬಂಡಿಗಳುರೂಪಕವಾಗಿವೆ. ಬಂಡಿ ಜನಪದ ಸಂಸ್ಕøತಿಯನ್ನು ಪ್ರತಿಬಿಂಬಿಸಿದರೆ, ರಥವು ಶಿಷ್ಟ ಪರಂಪರೆಯ ವಾಸ್ತುಶಿಲ್ಪದ ಸೌಂದರ್ಯವನ್ನು ಅಭಿವ್ಯಕ್ತಿಸುತ್ತದೆ ಎಂದು ತಿಳಿಸಿದರು.  ಡಾ.ವಿದ್ಯಾಲಕ್ಷ್ಮಿ ಕುಂಬಳೆ ಅವರು ಕಾಸರಗೋಡಿನ ಮಾರ್ಗ ಮತ್ತು ದೇಸಿ ನೃತ್ಯ ಪ್ರಕಾರಗಳ ಕುರಿತು ಪ್ರಬಂಧ ಮಂಡಿಸಿ, ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಈ ಸಂದರ್ಭ ನಡೆದ ವಿವಿಧ ಗೋಷ್ಠಿಗಳಲ್ಲಿ ಡಾ.ಯು.ಮಹೇಶ್ವರಿ, ಡಾ.ರತ್ನಾಕರ ಮಲ್ಲಮೂಲೆ ಮತ್ತು ಡಾ.ಶ್ರೀಧರ ಏತಡ್ಕ ಅವರು ಅಧ್ಯಕ್ಷತೆ ವಹಿಸಿದ್ದರು.

          ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಿಕೆ ಡಾ.ಆಶಾಲತಾ ಸಿ.ಕೆ. ಮತ್ತು ಪ್ರೊ.ಲಕ್ಷ್ಮಿ.ಕೆ ಕಾರ್ಯಕ್ರಮ ನಿರೂಪಿಸಿದರು. ಕಾಸರಗೋಡು ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರಿಂದ ತಿರುವಾದಿರ ನೃತ್ಯ ಮತ್ತು ಕು.ಅಸಾವರಿ ಹೊಸಂಗಡಿ ಅವರಿಂದ ಕೂಚಿಪುಡಿ ನೃತ್ಯ, ಪ್ರಾತ್ಯಕ್ಷಿಕೆ ನಡೆಯಿತು.  




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries