ಕೊಚ್ಚಿ: ಹೋಟೆಲ್ ತಿಂಡಿ ಸೇವಿಸಿ ಆರ್ ಟಿಒ ಹಾಗೂ ಪುತ್ರ ವಿಷಾಹಾರ ಬಾಧೆಗೊಳಗಾಗಿದ್ದಾರೆ. ಕೊಚ್ಚಿ ಆರ್ಯಾಸ್ ಹೋಟೆಲಲ್ಲಿ ಆಹಾರ ಸೇವಿಸಿ ಎರ್ನಾಕುಳಂ ಆರ್ ಟಿಒ ಜಿ. ಅನಂತಕೃಷ್ಣನ್ ಮತ್ತು ಅವರ ಪುತ್ರ ಅಸ್ವಸ್ಥರಾದರು. ಭೇದಿ ಹಾಗೂ ಜ್ವರದಿಂದ ಬಳಲುತ್ತಿರುವ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಆರ್‍ಟಿಒ ನೀಡಿದ ದೂರಿನ ಆಧಾರದ ಮೇಲೆ ಕಾಕನಾಡು ಸೀಪೆÇೀರ್ಟ್-ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಆರ್ಯಾಸ್ ಹೋಟೆಲ್‍ನಲ್ಲಿ ತಪಾಸಣೆ ನಡೆಸಲಾಯಿತು. ತೃಕ್ಕಾಕರ ನಗರಸಭೆಯ ಆರೋಗ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದರು. ನಗರಸಭೆಯ ಆರೋಗ್ಯ ಇಲಾಖೆ ಆರ್ಯಾಸ್ ಹೋಟೆಲ್ ನ್ನು ಬಂದ್ ಮಾಡಿಸಿದರು. 25 ಸಾವಿರ ದಂಡವನ್ನೂ ವಿಧಿಸಲಾಗಿದೆ.
ಕಳೆದ ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಅನಂತಕೃಷ್ಣನ್ ಮತ್ತು ಅವರ ಪುತ್ರ ಹೋಟೆಲ್‍ನಿಂದ ತುಪ್ಪರೋಸ್ಟ್, ವಡಾ ಮತ್ತು ಕಾಫಿ ಸೇವಿಸಿದ್ದರು. ಆದರೆ ಹತ್ತು ಗಂಟೆಯ ಹೊತ್ತಿಗೆ ಸಮಸ್ಯೆಯ ಅನುಭವವಾಯಿತು. ಸಂಜೆ ವೇಳೆಗೆ ಅಸ್ವಸ್ಥಗೊಂಡು ಜ್ವರ ಕಾಣಿಸಿಕೊಂಡು ಎರ್ನಾಕುಳಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.