ಪತ್ತನಂತಿಟ್ಟ: ಇರುಮುಡಿಕಟ್ಟೆಯಲ್ಲಿ ಸನ್ನಿಧಾನಕ್ಕೆ ತಂದ ಅಕ್ಕಿಯನ್ನು ದೇವಸ್ವಂ ಕೌಂಟರ್‍ನಲ್ಲಿ ನೀಡಿದರೆ ಬೆಲ್ಲನೈವೇದ್ಯ ಮತ್ತು ಪಾಯಸ ಲಭಿಸಲಿದೆ ಎಂದು ದೇವಸ್ವಂ ಮಂಡಳಿ ತಿಳಿಸಿದೆ.
ಹದಿನೆಂಟನೇ ಮೆಟ್ಟಲಿನ ಬಲಭಾಗದಲ್ಲಿರುವ ಅಪ್ಪಂ ಅರವಣ ಕೌಂಟರ್ ಬಳಿಯ ಬೆಲ್ಲನೈವೇದ್ಯ-ಪಾಯಸ ಲಭಿಸಲಿದೆ.
ಅಕ್ಕಿ ಕೊಟ್ಟರೆ ಬೇರೇನೂ ಕೊಡಬೇಕಾಗಿಲ್ಲ. ಇರುಮುಡಿಕಟ್ಟೆಗೆ ತಂದ ಅಕ್ಕಿಯನ್ನು ಹೆಚ್ಚಿನ ಯಾತ್ರಿಕರು ನೈತ್ತೋಣಿಯÀಲ್ಲಿ ಇಡಲು ಬಳಸುತ್ತಾರೆ. ಅಕ್ಕಿ ಸಂಗ್ರಹಿಸಲು ಕಂಟೈನರ್‍ಗಳನ್ನು ಕಾಂಪೌಂಡ್ ಮೇಲೆ ಮತ್ತು ಅದಕ್ಕೆ ಹೋಗುವ ಮೇಲ್ಸೇತುವೆ ಮೇಲೆ ಇರಿಸಲಾಗಿದೆ.
ಸನ್ನಿಧಿಯ ನೈತ್ತೋಣಿ ಮುಂಭಾಗ ಅಕ್ಕಿ ಸಂಗ್ರಹಿಸುವ ವ್ಯವಸ್ಥೆ ಇದೆ. ಈ ಎಲ್ಲ ಕಡೆ ದೇವಸ್ವಂ ಮಂಡಳಿ ತಾತ್ಕಾಲಿಕ ಸಿಬ್ಬಂದಿಯನ್ನು ನೇಮಿಸಿದೆ.