ಪಾಲಕ್ಕಾಡ್: ವಲ್ಲಪುಳ ರೈಲು ನಿಲ್ದಾಣದ ಬಳಿ ರೈಲು ಹಳಿತಪ್ಪಿದೆ. ನಿಲಂಬೂರಿನಿಂದ ಪಾಲಕ್ಕಾಡ್‍ಗೆ ತೆರಳುತ್ತಿದ್ದ ನಿಲಂಬೂರ್-ಶೋರ್ನೂರ್ ಪ್ಯಾಸೆಂಜರ್ ರೈಲಿನ ಇಂಜಿನ್ ಹಳಿ ತಪ್ಪಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ನಿನ್ನೆ ಸಂಜೆ 5:30ರ ಸುಮಾರಿಗೆ ಘಟನೆ ನಡೆದಿದೆ.
ಅಪಘಾತದಿಂದಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿತು. ಶೋರ್ನೂರು-ನಿಲಂಬೂರು ಪ್ಯಾಸೆಂಜರ್ ಮತ್ತು ನಿಲಂಬೂರು-ಶೋರ್ನೂರು ಪ್ಯಾಸೆಂಜರ್ ಅನ್ನು ರದ್ದುಗೊಳಿಸಲಾಗಿದೆ. ಅರ್ಧ ಗಂಟೆಯೊಳಗೆ ಸಮಸ್ಯೆ ಬಗೆಹರಿಸಲಾಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗೆ 9.30ಕ್ಕೆ ಹೊರಡಬೇಕಿದ್ದ ರಾಜಧಾನಿ ಎಕ್ಸ್‍ಪ್ರೆಸ್ ಎರಡು ಗಂಟೆ ತಡವಾಗಿ 11.30ಕ್ಕೆ ಹೊರಡಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.