ಕಾಸರಗೋಡು: ಕೂಡ್ಲು ಮನ್ನಿಪ್ಪಾಡಿಯ ಅಲಂಗೋಡು ಶ್ರೀ ಧೂಮಾವತಿ ದೇವಸ್ಥಾನ ನವೀಕರಣ ಅಂಗವಾಗಿ ಹೊರತರಲಾದ ಅದೃಷ್ಟಚೀಟಿ ಯೋಜನೆಯ ಬಿಡುಗಡೆ ಸಮಾರಂಭ ದೇವಸ್ಥಾನದಲ್ಲಿ ಜರುಗಿತು. ಬ್ರಹ್ಮಶ್ರೀ ಅರವತ್ತ್ ಪದ್ಮನಾಭ ತಂತ್ರಿ ನವೀಕರಣ ಸಮಿತಿಯ ಅಧ್ಯಕ್ಷರಿಗೆ ಗಿಫ್ಟ್ ಕೂಪನ್ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ದೇವಸ್ಥಾನದ ನವೀಕರಣದ ಸುಸಂದರ್ಭ ಪ್ರತಿಯೊಬ್ಬ ಭಕ್ತ ಈ ಮಹತ್ಕಾರ್ಯದಲ್ಲಿ ತೊಡಗಿಸಿಕೊಲ್ಳುವ ಮೂಲಕ ತಮ್ಮ ಜೀವನವನ್ನು ಪಾವನಗೊಳಿಸಬೇಕು ಎಂದು ತಿಳಿಸಿದರು. ಅಲಂಗೋಡು ಶ್ರೀ ಧೂಮಾವತಿ ದೈವಸ್ಥಾನದ ನವೀಕರಣ ಸಮಿತಿಯ ಅಧ್ಯಕ್ಷ ನಾರಾಯಣ ಬೋವಿಕಾನ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇತ್ರದ ಅನುವಂಶಿಕ ಮೊಕ್ತೆಸರ ಕೆ. ಜಿ. ಶ್ಯಾನುಬೋಗ್, ಕ್ಷೇತ್ರ ಪುರೋಹಿತ ಸೂರ್ಯನಾರಾಯಣ ಆಡಿಗ, ಆಲಂಗೋಡು ಶ್ರೀ ಧೂಮಾವತಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ್ ಗಟ್ಟಿ, ಕೋಶಾಧಿಕಾರಿ ಚಂದ್ರಶೇಖರಗಟ್ಟಿ, ದಾಮೋದರ ಮಣಿಯಾಣಿ, ನವೀನ್ ಮಣಿಯಾಣಿ, ಪದ್ಮನಾಭ, ಶಿವಮಣಿ ಯಾಣಿ, ರತೀಶ್ ಗಟ್ಟಿ, ನವೀನ್ ಯಾದವ್, ರವಿ ಮಣಿಯಾಣಿ, ಕುಞÂರಾಮ ಮಣಿಯಾಣಿ ಉಪಸ್ಥಿತರಿದ್ದರು.
ಅಲಂಗೋಡು ಶ್ರೀ ಧೂಮಾವತಿ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ನವೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿಉದಯಕುಮಾರ್ ಮನ್ನಿಪಾಡಿ ಅವರು, ಕಾರ್ಯಕ್ರಮವ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನವೀಕರಣ ಸಮಿತಿಯ ಕೋಶಾಧಿಕಾರಿ ನಾಗೇಶ್ ಗಟ್ಟಿ ವಂದಿಸಿದರು.