ಕುಂಬಳೆ: ಬಂಟ್ವಾಳ ಸುರಿಬೈಲು ಅಶರೀಯಾ ರಜತ ಮಹೋತ್ಸವ ಹಾಗೂ ಸನದ್ ದಾನ ಸಮ್ಮೇಳನವು ಇಂದಿನಿಂದ 3 ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಸುರಿಬೈಲು ಅಶರೀಯಾ ನಗರದಲ್ಲಿ ನಡೆಯಲಿದೆ ಎಂದು ಸಂಬಂಧಪಟ್ಟವರು ಕುಂಬಳೆ ಪ್ರೆಸ್ ಪೋರಂನಲ್ಲಿ ನಿನ್ನೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವರು. ಈ ಸಂಬಂಧ ಶೈಖುನಾ ಸುರಿಬೈಲ್ ಉಸ್ತಾದರ 22ನೇ ವಾರ್ಷಿಕೋತ್ಸವವೂ ನಡೆಯಲಿದೆ.
ಇಂದು ಸಂಜೆ 6.30ಕ್ಕೆ ಮಖಾಂ ಝಿಯಾರತ್‍ಗೆ ಬೊಳ್ಮಾರ್ ಉಸ್ತಾದ್ ಚಾಲನೆ ನೀಡುವರು. ನಂತರ ಶಾದುಲಿ ರಾತೀಬ್ ಪೆÇಯ್ಯತ್ತಬೈಲು ಮುದರಿಸ್ ಅಬ್ದುಲ್ ಮಜೀದ್ ಫೈಝಿ ನೇತೃತ್ವ ವಹಿಸಲಿದ್ದಾರೆ. ರಾತ್ರಿ 8.30ಕ್ಕೆ ಧಾರ್ಮಿಕ ಸಭೆಗೆ ಸೈಯದ್ ಅತ್ತಾವುಲ್ಲಾ ತಂಙಳ್ ಉದ್ಯಾವರ ನೇತೃತ್ವ ವಹಿಸುವರು. ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣ ಮಾಡುವರು.
ನಾಳೆ ಸಂಜೆ 6.30ಕ್ಕೆ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ನೇತೃತ್ವದಲ್ಲಿ ಮದನಿಯಂ ಮಜ್ಲಿಸ್ ನಡೆಯಲಿದೆ. ನಂತರ ಜಲಾಲಿಯ ರತೀಬ್ ಸಮಾರೋಪ ಪ್ರಾರ್ಥನೆಯನ್ನು ಸೈಯದ್ ಪೂಕ್ಕುಂಞÂ್ಞ ತಂಙಳ್ ಉದ್ಯಾವರ ಹಾಗೂ ಬಾಯಾರ್ ತಂಙಳ್ ವಹಿಸುವರು. ನ.3 ರಂದು ಸಂಜೆ 5 ಕ್ಕೆ ಮಲಪ್ಪುರಂ ತ್ವಾಹ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದೆ. ನಂತರ ಖತಮುಲ್ ಬುಖಾರಿ ಅಬೂಬಕರ್ ಬಾಖವಿ ಖತಮುಲ್ ಕುರ್ ಆನ್ ಜಾಮಿಯಾ ಸಅದಿಯಾ ಪ್ರ. ಸ್ವಾಲಿಹ್ ಮುಸ್ಲಿಯಾರ್ ನೇತೃತ್ವ ವಹಿಸಲಿದ್ದಾರೆ. ಸೈಯದ್ ಮದಕ ತಂಙಳ್ ವಂದನೆ ಸ್ವೀಕರಿಸುವರು. ಸಂಜೆ 6.30ಕ್ಕೆ ಸಮಾರೋಪ ಸಮಾರಂಭದಲ್ಲಿ ಕುಂಬೋಳ್ ಸೈಯದ್ ಕೆ.ಎಸ್. ಅಟ್ಟಕೋಯ ತಂಙಳ್ ಉದ್ಘಾಟಿಸುವರು. ಒಳಮುಂಡ ಉಸ್ತಾದ್ ಅಧ್ಯಕ್ಷತೆ ವಹಿಸುವರು. ಸೈಯದ್ ಖಲೀಲುಲ್ ಬುಖಾರಿ ತಂಙಳ್ ಸನದ್ ದಾನ ನೆರವೇರಿಸಲಿದ್ದಾರೆ.ಅಬ್ದುಲ್ ರಹಿಮಾನ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ. ಸೈಯದ್ ಅಶ್ರಫ್ ತಂಙಳ್ ಆದೂರು ಪ್ರಾರ್ಥನೆ ನೆರವೇರಿಸುವರು.
ಕರ್ನಾಟಕ ಸಭಾಪತಿ ಯು.ಟಿ.ಖಾದರ್, ಯು.ಟಿ.ಇಫ್ತಿಕಾರ್, ಯೇನಪೆÇೀಯ ಅಬ್ದುಲ್ಲಾ ಹಾಜಿ, ಅಬ್ದುಲ್ಲಾ ಹಾಜಿ ನಲ್ಕ, ಸೈಯದ್ ಇಸ್ಮಾಯಿಲ್ ತಂಙಳ್ ಉಜಿರೆ, ಸೈಯದ್ ಜಹೀರ್ ತÀಳ್ ಮಲಾರ್, ಸೈಯದ್ ಜಲಾಲ್ ತಂಙಳ್ ಮಲಾರ್, ಮಾಣಿ ಉಸ್ತಾದ್, ಹುಸೈನ್ ಸಅದಿ ಕೆ.ಸಿ.ರೋಡ್ ಮೊದಲಾದವರು ಉಪಸ್ಥಿತರಿರುವರು.
ಸಂದರ್ಭದಲ್ಲಿ ಸಾಹಿತ್ಯ ಕೈಂಕರ್ಯಕ್ಕಾಗಿ ಕರ್ನಾಟಕ ಸರ್ಕಾರದಿಂದ ಗುರುತಿಸಲ್ಪಟ್ಟ ಬನ್ನೂರಿನ ಅಮೀರ್ ಅವರನ್ನು ಸನ್ಮಾನಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿ ಅಶರೀಯಾ ಉಪಾಧ್ಯಕ್ಷ ಸೈಯದ್ ಶಿಹಾಬುದ್ದೀನ್ ತಂಙಳ್ ಮದಕ, ಪ್ರಧಾನ ವ್ಯವಸ್ಥಾಪಕ ಸಿ.ಎಚ್. ಮುಹಮ್ಮದಲಿ ಸಖಾಫಿ ಅಶ್ರಿ, ಕೇಂದ್ರ ಸಮಿತಿ ಸದಸ್ಯ ಯೂಸುಫ್ ಮದನಿ ಮತ್ತು ಮುಸ್ತಫಾ ಕಡಂಬಾರ್ ಇದ್ದರು.