ಬದಿಯಡ್ಕ: ಕೊಟ್ಟಾಯಂ ಮಹಾತ್ಮ ಗಾಂಧಿ ವಿಶ್ವ ವಿಧ್ಯಾಲಯದಲ್ಲಿ ಜಿಯೊ ಇನ್ ಫರ್ಮೇಶನ್ ಸಯನ್ಸ್ ಆಂಡ್ ಟೆಕ್ನೋಲಜಿ ವಿಷಯದಲ್ಲಿ ವ್ಯಾಸಂಗಗೈಯ್ಯುತ್ತಿರುವ ಶ್ರುತಿ ಮಯ್ಯ ಕೆ ಇವರಿಗೆ ಬಿ.ಎಸ್ಸಿ ಯಲ್ಲಿ ಉನ್ನತ ಅಂಕ ಗಳಿಸಿದ್ದು, 2021-22 ನೇ ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದ ವಿಧ್ಯಾರ್ಥಿಗಳಿಗೆ ಒ.ಎನ್.ಜಿ.ಸಿ ಫೌಂಡೇಶನ್ ಪ್ರಧಾನ ಕಚೇರಿ ನವದೆಹಲಿಯಲ್ಲಿ ಕೊಡಮಾಡುವ ನಗದು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ. ಈಕೆ ನೀರ್ಚಾಲು ಸಮೀಪದ ಕುಕ್ಕಂಕೂಡ್ಲು ಕೇಶವಮಯ್ಯ- ಲಕ್ಷ್ಮಿ ದಂಪತಿಗಳ ಪುತ್ರಿ ಮತ್ತು ಕಾಸರಗೋಡು ಸರ್ಕಾರಿ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದಾರೆ.