ತಿರುವನಂತಪುರ: ಯುವ ಕಾಂಗ್ರೆಸ್ ಚುನಾವಣೆಗೆ ನಕಲಿ ಗುರುತಿನ ಚೀಟಿ ತಯಾರಿಸಿದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ರಾಹುಲ್ ಮಂಕೂತ್ತಿಲ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ನಾಳೆ ಬೆಳಗ್ಗೆ ತಿರುವನಂತಪುರಂ ಮ್ಯೂಸಿಯಂ ಪೋಲೀಸರ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ನಕಲಿ ಗುರುತಿನ ಚೀಟಿ ತಯಾರಿಸುವವರಿಗೆ ರಾಹುಲ್ ಸಹಾಯ ಮಾಡಿದ್ದಾರೆ ಎಂದು ಪೋಲೀಸರು ಶಂಕಿಸಿದ್ದಾರೆ. ಆರೋಪಿಗಳಿಗೆ ಪ್ರಯಾಣಿಸಲು ಕಾರನ್ನು ಸಹ ನೀಡಲಾಗಿದೆ. ಆರೋಪಿ ಫೆನಿ ಮತ್ತು ಬಿನಿಲ್ ಅವರು ರಾಹುಲ್ ಸಮ್ಮುಖದಲ್ಲಿ ಮೊಬೈಲ್ ಪೋನ್ ಬಚ್ಚಿಟ್ಟಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.
ನಕಲಿ ಗುರುತಿನ ಚೀಟಿ ತಯಾರಿಸಿದ ಪ್ರಕರಣದಲ್ಲಿ ಇದೀಗ ಮತ್ತೋರ್ವ ಯುವ ಕಾಂಗ್ರೆಸ್ ಮುಖಂಡನನ್ನೂ ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಕಾಸರಗೋಡು ತ್ರಿಕರಿಪುರ ಮೂಲದ ಜೇಸನ್ ಥಾಮಸ್ ಎಂಬಾತನಿಗಾಗಿ ಪೋಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಗುರುತಿನ ಚೀಟಿ ತಯಾರಿಸುವ ಸಿಆರ್ ಕಾರ್ಡ್ ಅರ್ಜಿ ಸಿದ್ಧಪಡಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.