ಬದಿಯಡ್ಕ: ಲೈಫ್ ಇನ್ಶೂರೆನ್ಸ್ ಕೋರ್ಪರೇಶನ್ ಆಫ್ ಇಂಡಿಯಾ ಕಾಸರಗೋಡು ಶಾಖೆಯು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠವನ್ನು ಭಿಮಾಸ್ಕೂಲ್ ಎಂದು ಘೋಷಿಸಿದೆ. ಎಲ್‍ಐಸಿಯ ಜಿಲ್ಲೆಯ ಮೊದಲ ಭಿಮಾಸ್ಕೂಲ್ ಇದಾಗಿದೆ. ಈ ಸಂಬಂಧ ನಡೆದ ಕಾರ್ಯಕ್ರಮದಲ್ಲಿ ಮುಳ್ಳೇರಿಯಾ ಶಾಖೆಯ ಮ್ಯಾನೇಜರ್ ಪ್ರೇಮಾನಂದನ್, ಕಾಸರಗೋಡು ಶಾಖೆಯ ಸಹಾಯಕ ಪ್ರಬಂಧಕ ಶಶಿಧರನ್, ಸಹಾಯಕ ಪ್ರಬಂಧಕ ಅಮರಜಿತ್, ಶಾಲಾ ವ್ಯವಸ್ಥಾಪಕ ಜಯಪ್ರಕಾಶ್ ಪಜಿಲ, ಕಾರ್ಯದರ್ಶಿ ರಾಜಗೋಪಾಲ ಚುಳ್ಳಿಕಾನ, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಪಂಜಿತ್ತಡ್ಕ ಭಾಗವಹಿಸಿದ್ದರು. ಎಲ್‍ಐಸಿಯ ಸಲಹೆಗಾರರಾದ ರಮೇಶ್ ಭಟ್ ಏತಡ್ಕ ಹಾಗೂ ರಾಘವೇಂದ್ರ ಅಮ್ಮಣ್ಣಾಯ ಬದಿಯಡ್ಕ ಈ ಕಾರ್ಯದಲ್ಲಿ ಮುತುವರ್ಜಿಯನ್ನು ವಹಿಸಿದ್ದರು.