ಒಂದು ವರ್ಷದ ಜೈಲು ಶಿಕ್ಷೆ ಪೂರ್ಣಗೊಳಿಸಿದ ನಂತರ ಈ ಕೈದಿಗಳನ್ನು ಈಗ ಬಿಡುಗಡೆ ಮಾಡಲಾಗಿದೆ. ಇವರು ಮಾಡಿದ ಅಪರಾಧವೇನು? ಸ್ಮಶಾನದಲ್ಲಿ ಹುಲ್ಲು ಮತ್ತು ಎಲೆಗಳನ್ನು ತಿಂದಿರುವುದು!!
ಒಂದು ವರ್ಷದ ಜೈಲು ಶಿಕ್ಷೆ ಪೂರ್ಣಗೊಳಿಸಿದ ನಂತರ ಈ ಕೈದಿಗಳನ್ನು ಈಗ ಬಿಡುಗಡೆ ಮಾಡಲಾಗಿದೆ. ಇವರು ಮಾಡಿದ ಅಪರಾಧವೇನು? ಸ್ಮಶಾನದಲ್ಲಿ ಹುಲ್ಲು ಮತ್ತು ಎಲೆಗಳನ್ನು ತಿಂದಿರುವುದು!!
ಹೌದು! ಬಾಂಗ್ಲಾದೇಶದ ಬರೀಶಾಲ್ ನಗರದ ಸ್ಮಶಾನವೊಂದರಲ್ಲಿ ಹುಲ್ಲು ಮತ್ತು ಮರಗಳ ಎಲೆಗಳನ್ನು ತಿಂದಿದ್ದಕ್ಕಾಗಿ ಜೈಲಿನಲ್ಲಿ ಇರಿಸಲಾಗಿದ್ದ ಒಂಬತ್ತು ಮೇಕೆಗಳನ್ನು ಒಂದು ವರ್ಷದ ನಂತರ ಶುಕ್ರವಾರ ಬಿಡುಗಡೆ ಮಾಡಲಾಗಿದೆ.
ದಕ್ಷಿಣ-ಮಧ್ಯ ಬಾಂಗ್ಲಾದೇಶದ ಕೀರ್ತಾಂಖೋಲಾ ನದಿಯ ದಡದಲ್ಲಿರುವ ಬಾರಿಶಾಲ್ ಸಿಟಿ ಕಾರ್ಪೊರೇಷನ್ (BCC) ನ ನೂತನವಾಗಿ ಚುನಾಯಿತರಾದ ಮೇಯರ್ ಅಬುಲ್ ಖೈರ್ ಅಬ್ದುಲ್ಲಾ (ಖೋಕನ್ ಸೆರ್ನಿಯಾಬಾತ್) ಅವರ ಸೂಚನೆ ಮೇರೆಗೆ ಮೇಕೆಗಳನ್ನು ಬಿಡುಗಡೆ ಮಾಡಲಾಯಿತು.
ಕಳೆದ ವರ್ಷ ಡಿಸೆಂಬರ್ 6 ರಂದು ನಗರದ ಸ್ಮಶಾನದಲ್ಲಿ ಹುಲ್ಲು ಮತ್ತು ಮರಗಳ ಎಲೆಗಳನ್ನು ತಿಂದಿದ್ದಕ್ಕಾಗಿ ಈ ಪ್ರಾಣಿಗಳನ್ನು ಅಂದಾಜು ಒಂದು ವರ್ಷದವರೆಗೆ ಬಂಧಿಸಿ ಇರಿಸಲಾಗಿತ್ತು ಎಂದು ತಿಳಿದುಬಂದಿದೆ. ಆಗಿನ ಬಿಸಿಸಿ ಆಡಳಿತ ಅಧಿಕಾರಿ ಸ್ವಪೋನ್ ಕುಮಾರ್ ದಾಸ್ ಈ ಸಂಗತಿಯನ್ನು ಖಚಿತಪಡಿಸಿದ್ದರು.
ಇತ್ತೀಚೆಗಷ್ಟೇ ಮೇಕೆಗಳ ಮಾಲೀಕ ಶಹರಿಯಾರ್ ಸಚಿಬ್ ರಾಜೀಬ್ ಅವರು ಬಿಸಿಸಿ ಮೇಯರ್‌ಗೆ ಮನವಿ ಸಲ್ಲಿಸಿದ್ದು, ಶುಕ್ರವಾರ ಬಿಡುಗಡೆ ಮಾಡಲಾಗಿದೆ.
ಆಡುಗಳನ್ನು ಮಾಲೀಕರಿಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಹಾಲಿ ಬಿಸಿಸಿ ಆಡಳಿತ ಅಧಿಕಾರಿ ಅಲಂಗೀರ್ ಹೊಸೈನ್ ಮತ್ತು ರಸ್ತೆ ನಿರೀಕ್ಷಕರಾದ ರಿಯಾಜುಲ್ ಕರೀಂ ಮತ್ತು ಇಮ್ರಾನ್ ಹೊಸೈನ್ ಖಾನ್ ಉಪಸ್ಥಿತರಿದ್ದರು.