ಮಧೂರು: ಪರಕ್ಕಿಲ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ ನಡೆಯಿತು. ಗ್ರಾ.ಪಂ.ಸದಸ್ಯ ಬಶೀರ್ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ದಿನಾಚರಣೆಯ ಮಹತ್ವದ ಕುರಿತು ಬಾಲಕೃಷ್ಣ ಉಳಿಯ, ಅಧ್ಯಾಪಿಕೆ ವಿಮಲ ಮಾತನಾಡಿದರು.
ಅಭಿವೃದ್ದಿ ಸಮಿತಿಯ ಸದಸ್ಯರಾದ ಸುರೇಶ್ ಯು. ಆರ್, ಪ್ರಭಾಕರ ಉಳಿಯ, ಪದ್ಮರಾಜ ಹಾಗೂ ಪುಟಾಣಿ ಮಕ್ಕಳ ತಾಯಂದಿರು ಭಾಗಹಿಸಿದ್ದರು. ಅಂಗನವಾಡಿ ಪರಿಸರದ ಪುರುಷೋತ್ತಮ- ಸುರೇಖ ದಂಪತಿಗಳು ಮತ್ತು ತರುಣಕಲಾವೃಂದ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು. ವಿಮಲ ಸ್ವಾಗತಿಸಿ, ಆನಂದಿ ವಂದಿಸಿದರು.