ಕಾಸರಗೋಡು: ಬಾಲಗೋಕುಲಂನ ಸಾಪ್ತಾಹಿಕ ತರಗತಿಗಳ ಮೂಲಕ ನಮ್ಮಿಂದ ದೂರಾಗುತ್ತಿರುವ ಭಾರತೀಯ ಸಂಸ್ಕೃತಿಯನ್ನು ಪೆÇೀಷಿಸಿ ಬೆಳೆಸಲು ಸಹಕಾರಿಯಾಗುತ್ತಿರುವುದಾಗಿ ಬಾಲಗೋಕುಲಂ ಜಿಲ್ಲಾಧ್ಯಕ್ಷ ಡಾ. ಸಿ.ಬಾಬು ತಿಳಿಸಿದ್ದಾರೆ.
ಅವರು ಬಾಲಗೋಕುಲಂ ಉದುಮ ತಾಲೂಕು ಕಲೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು.
ಮಕ್ಕಳಲ್ಲಿ ಕಲಾತ್ಮಕ ಮತ್ತು ಅರಿವಿನ ಸಾಮಥ್ರ್ಯ ಅಭಿವೃದ್ಧಿಪಡಿಸುವಲ್ಲಿಬಾಲಗೋಕುಲಂ ಚಟುವಟಿಕೆ ಶ್ಲಾಘನೀಯ ಎಂದು ತಿಳಿಸಿದರು. ಇತರ ಕಲಾ ಉತ್ಸವಗಳಿಗಿಂತ ಭಿನ್ನವಾಗಿ, ಬಾಲಗೋಕುಲಂನ ಸ್ಪರ್ಧೆಯಲ್ಲಿ ಹಲವಾರು ಕಾಣಬಹುದಾಗಿದೆ. ಈ ಮೂಲಕ ಭಾರತೀಯ ಸಂಸ್ಕøತಿಗಳ ಸಂಕ್ಷಿಪ್ತ ಪರಿಚಯ ನಡೆಸುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು. ಸಮಾರೋಪ ಸಮಾರಂಭವನ್ನು ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಕುಮಾರಿ ಹರಿತಾ ಹರೀಶ್ ಸಮಾರಂಭ ಉದ್ಘಾಟಿಸಿದರು. ಸಂಘಟನಾ ಸಮಿತಿ ಅಧ್ಯಕ್ಷ ಎಂ. ಸದಾಶಿವನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು.
ಚೆಮ್ನಾಡು ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರನ್ ಕುಳಂಗರ, ಸುಚಿತ್ರಾ ಹರೀಶ್, ಬಾಲಗೋಕುಲಂ ಕಣ್ಣೂರು ಪ್ರಾಂತ ಭಗಿನಿ ಪ್ರಮುಖ್ ದೀಪಜ್ಯೋತಿ ಪರಂಬ, ಬಿ.ಎನ್.ನಾರಾಯಣನ್, ಸಂಘಟನಾ ಸಮಿತಿ ಉಪಾಧ್ಯಕ್ಷ, ನಾರಾಯಣನ್ ವಡಕ್ಕಿನಿಯಾ, ಗಂಗಾಧರನ್ ಆಚೇರಿ ನಾರಾಯಣನ್ ಕೈಂದಾರ್, ಸಂಘಟನಾ ಸಮಿತಿಯ ಕೋಶಾಧಿಕಾರಿ, ಮಾತೃ ಸಮಿತಿ ಅಧ್ಯಕ್ಷ ಪಿ. ಮಾಲತಿ ಉಪಸ್ಥಿತರಿದ್ದರು. ಬಾಲಗೋಕುಲಂ ತಾಲೂಕು ಅಧ್ಯಕ್ಷ ರಾಮಚಂದ್ರನ್ ಸ್ವಾಗತಿಸಿದರು. ಸಂಘಟನಾ ಸಮಿತಿ ಸಂಚಾಲಕ ಭರತನ್ ವಲಯಂಕುಯಿ ವಂದಿಸಿದರು.