ಪೆರ್ಲ : ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಪೆರ್ಲ ಇದರ ಆಶ್ರಯದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ಪೆರ್ಲ ಪಡ್ರೆ ಸಭಾ ಭವನದಲ್ಲಿ ಜರಗಿತು. ಪೆರ್ಲದ ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಸಹಯೋಗದೊಂದಿಗೆ ಶಿಬಿರ ಆಯೋಜಿಸಲಾಗಿತ್ತು.
ಕರ್ನಾಟಕ ಉತ್ತರ -ಕಾಸರಗೋಡು ಜಿಲ್ಲಾ ಸತ್ಯಸಾಯಿ ಸೇವಾ ಸಂಸ್ಥೆಗಳ ಅಧ್ಯಕ್ಷ ಹಿರಣ್ಯ ಮಹಾಲಿಂಗ ಭಟ್ ಶಿಬಿರ ಉದ್ಘಾಟಿಸಿದರು. ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ, ಪೆರ್ಲ ಘಟಕ ಅಧ್ಯಕ್ಷ ಬಿ. ಪಿ. ಶೇಣಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪೆÇಲೀಸ್ ಸಬ್ ಇನ್ಸ್‍ಪೆಕ್ಟರ್ ಶೀನಪ್ಪ ಪೂಜಾರಿ ಅಲಾರ್, ಡಾ. ವಿಷ್ಣು ಪ್ರಸಾದ್ ಬರೆಕೆರೆ, ಡಾ. ಸತ್ಯನಾರಾಯಣ ಬಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಕೃಷ್ಣ ಪ್ರಸಾದ್ ಸ್ವಾಗತಿಸಿದರು. ಡಾ. ಕೃಷ್ಣ ಮೋಹನ ಬಜಕೂಡ್ಲು ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಬಿಲ್ಲವ ಸಂಘದ ಕೋಶಾಧಿಕಾರಿ ಪದ್ಮನಾಭ ಸುವರ್ಣ ಬಜಕೂಡ್ಲು ವಂದಿಸಿದರು.
ಶಿಬಿರದಲ್ಲಿ ಡಾ. ಸತ್ಯನಾರಾಯಣ ಬಿ, ಡಾ. ವಿಷ್ಣು ಪ್ರಸಾದ್ ಬರೆಕರೆ, ಡಾ. ಕೃಷ್ಣ ಮೋಹನ ಬಜಕೂಡ್ಲು, ಡಾ. ಆಶಾ ಬರೆಕರೆ ಶಿಬಿರಾರ್ಥಿಗಳ ತಪಾಸಣೆ ನಡೆಸಿದರು. ಕುಂಬಳೆ ಶ್ರೀ ಗೋಪಾಲಕೃಷ್ಣ ಫಾರ್ಮೆಸಿ, ಪುತ್ತೂರು ಸಂಜೀವಿನಿ ಕ್ಲಿನಿಕ್, ಕಬಕ ಶ್ರೀ ಸದ್ಗುರು ಡಿಸ್ಟ್ರಿಬ್ಯೂಟರ್, ಪುತ್ತೂರು ಕಲ್ಲಾರೆ ಅಕ್ಷಯ ಡಿಸ್ಟ್ರಿಬ್ಯೂಟರ್ ವತಿಯಿಂದ ಶಿಬಿರಕ್ಕೆ ಉಚಿತವಾಗಿ ಔಷಧ ನೀಡಿ ಸಹಕರಿಸಿದರು. 80ಕ್ಕೂ ಹೆಚ್ಚುಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.