ಕಾಸರಗೋಡು: ನವಕೇರಳ ಸಮಾವೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರು ರಜಾದಿನವಾದ ಭಾನುವಾರವೂ ಕರ್ತವ್ಯಕ್ಕೆ ಹಾಜರಾಗುವಂತೆ ಹೊರಡಿಸಲಾಗಿರುವ ಆದೇಶ ಹಿಂತೆಗೆಯುವುದು ಅಥವಾ ಅಗತ್ಯ ತಿದ್ದುಪಡಿ ತರುವಂತೆ ಸರ್ಕಾರಿ ನೌಕರರ ಸಂಘಟನೆ'ಸೆಟ್ಟೋ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಾಂಪೆನ್ಸೇಟರಿ ಆಫ್ ಸೇರಿದಂತೆ ಉದ್ಯೋಗಿಗಳನ್ನು ವಿಶ್ರಾಂತಿ ಇಲ್ಲದೆ ಭಾನುವಾರವೂ ದುಡಿಸಲು ಮುಂದಗಿರುವ ಸರ್ಕಾರದ ಧೋರಣೆ ಖಂಡನೀಯ ಎಂದು ಅರ್ಜಿಯ ಮೂಲಕ ತಿಳಿಸಲಾಗಿದೆ. ಈ ಆದೇಶವನ್ನು ಹಿಂಪಡೆಯಲು ಅಥವಾ ಅಗತ್ಯ ತಿದ್ದುಪಡಿ ಮಾಡಲು ಜಿಲ್ಲಾಧಿಕಾರಿ ಸಿದ್ಧರಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಎಡಿಎಂ ನವೀನ್ ಬಾಬು ಮನವಿ ಸ್ವೀಕರಿಸಿದರು. ಸೆಟ್ಟೋ ಜಿಲ್ಲಾಧ್ಯಕ್ಷ ಜಯಪ್ರಕಾಶ್ ಕೆ.ಎಂ, ಮುಖಂಡರಾದ ಎ.ಟಿ.ಶಶಿ, ವತ್ಸಲಕೃಷ್ಣನ್, ವಿ.ಎಂ.ರಾಜೇಶ್, ಎಸ್.ಎಂ.ರಜನಿ, ಜಯರಾಜ್ ನಾರಾಯಣನ್, ಪ್ರತೀಶ್ ಬಾಬು, ಕೆ. ಅಶೋಕ, ಸಫೀನಾ, ಪ್ರಸೀತಾ ಕೈಪ್ರತ್, ವಿ.ಕೆ.ಬಾಲಕೃಷ್ಣನ್ ನೇತೃತ್ವ ವಹಿಸಿದ್ದರು.