ಕಾಸರಗೋಡು: ಪೆರಿಯ ಆಲಂಗೋಡು ಗೋಕುಲಂ ಗೋಶಾಲೆಯಲ್ಲಿ ಮೂರನೇ ದೀಪಾವಳಿ ಸಂಗೀತೋತ್ಸವಕ್ಕೆ ಎಡನೀರು ಮಠಾಧಿಪತಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿ ಚಾಲನೆ ನೀಡಿದರು. ಈ ಸಂದರ್ಭ ಆಶೀರ್ವಚನ ನೀಡಿದ ಅವರು, ಕಲೆಗಳ ಪೋಷಣೆ ಸಾಮಾಜಿಕ, ಸಾಂಸ್ಕøತಿಕ ಬೆಳವಣಿಗೆಗೆ ಸಹಕಾರಿ. ಗೋಕುಲಂ ಗೋಶಾಲಾ ಸರಣಿಯು ಭಾರತೀಯ ಕಲೆಗಳಿಗೆ ಮತ್ತು ಕಲಾವಿದರನ್ನು ಉತ್ತೇಜಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಉದುಮ ಶಾಸಕ ಸಿ.ಎಚ್.ಕುಂಜಂಬು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಂಗೀತವನ್ನು ಪ್ರಕೃತಿಯ ಸಕಲ ಚರಚರಗಳೂ ಆಸಾದಿಸುತ್ತಿದೆ ಎಂಬುದಕ್ಕೆ ಗೋಕುಲಂ ಗೋಶಾಲೆ ಸಾಕ್ಷಿಯಾಗಿದೆ. ಪರಂಪರೆ ವಿದ್ಯಾಪೀಠದ ಆಚಾರ್ಯ ವಿಷ್ಣು ಪ್ರಸಾದ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿಶಾಸಕ ಹಾಗೂ ಪರಂಪರೆ ವಿದ್ಯಾಪೀಠದ ರಕ್ಷಾಧಿಕಾರಿ ಕೆ. ಕುಞÂರಾಮನ್, ಕೇಂದ್ರೀಯ ವಿಶ್ವವಿದ್ಯಾಲಯ ಪರೀಕ್ಷಾ ನಿಯಂತ್ರಕ ಜಯಪ್ರಕಾಶ್ ಮತ್ತು ಬಿಆರ್‍ಡಿಸಿ ಎಂಡಿ ಶಿಜಿನ್ ಪರಂಬತ್ ವಂದಿಸಿದರು.
ದೀಪಾವಳಿ ಸಂಗೀತೋತ್ಸವ ನ. 10ರಿಂದ 19ರ ವರೆಗೆ ಜರುಗಲಿದ್ದು, ಹತ್ತು ದಿವಸಗಳ ಕಾಲಾವಧಿಯಲ್ಲಿ 350ಕ್ಕೂ ಹೆಚ್ಚು ಮಂದಿ ಕಲಾವಿದರು ತಮ್ಮ ಕಲಾಪ್ರತಿಭೆ ಪ್ರದಶಿಸಲಿದ್ದಾರೆ.
ಖ್ಯಾತ ಪಿಟೀಲು ವಾದಕ ಪದ್ಮಭೂಷಣ ಎಲ್ ಸುಬ್ರಮಣ್ಯಂ, ಖ್ಯಾತ ಹಿನ್ನೆಲೆ ಗಾಯಕಿ ಕವಿತಾ ಕೃಷ್ಣಮೂರ್ತಿ, ಹಿನ್ನಲೆ ಗಾಯಕಿ ಅನೂಪ್ ಶಂಕರ್, ನೃತ್ಯಕಲಾವಿದೆ ಪದ್ಮಭೂಷಣ ಪದ್ಮಾಸುಬ್ರಮಣ್ಯಂ, ಕರ್ನಾಟಕ ಸಂಗೀತ ದಿಗ್ಗಜರಾದ ಪಟ್ಟಾಭಿರಾಮ ಪಂಡಿತ್, ಅಭಿಷೇಕ್ ರಘುರಾಮ್, ಕುನ್ನಕುಡಿ ಬಾಲಮುರಳಿ ಕೃಷ್ಣ, ಎನ್.ಜೆ.ನಂದಿನಿ, ಘಟಂ ಮಾಂತ್ರಿಕ ಸುರೇಶ್ ವೈದ್ಯನಾಥನ್, ಮೃದಂಗ ವಿದ್ವಾನ್ ಪತ್ರಿ ಸತೀಶ್ ಕುಮಾರ್ ಸೇರಿದಂತೆ 350ಕ್ಕೂ ಹೆಚ್ಚು ಮಂದಿ ಪ್ರತಿಭಾವಂತ ಕಲಾವಿದರು ಈ ಬಾರಿ ಗೋಶಾಲಾ ಸಂಗೀತೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.