ತಿರುವನಂತಪುರಂ: ಸಾಹಿತ್ಯ ಕ್ಷೇತ್ರದ ಸಮಗ್ರ ಕೊಡುಗೆಗಾಗಿ ನೀಡುವ ರಾಜ್ಯ ಸರ್ಕಾರದ ಕೇರಳ ಜ್ಯೋತಿ ಪ್ರಶಸ್ತಿ ಟಿ. ಪದ್ಮನಾಭನ್ ಅವರಿಗೆ ಒದಗಿಬಂದಿದೆ.
ನಿವೃತ್ತ ನ್ಯಾಯಮೂರ್ತಿ ಎಂ. ಫಾತಿಮಾ ಬೀವಿ ಮತ್ತು ಸೂರ್ಯ ಕೃಷ್ಣಮೂರ್ತಿ ಅವರಿಗೆ ಕೇರಳ ಪ್ರಭಾ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪುನಲೂರು ಸೋಮರಾಜನ್, ಡಾ. ವಿ.ಪಿ. ಗಂಗಾಧರನ್, ರವಿ.ಡಿಸಿ, ಕೆ.ಎಂ. ಚಂದ್ರಶೇಖರ್ ಮತ್ತು ರಮೇಶ್ ನಾರಾಯಣ್ ಕೂಡ ಕೇರಳ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಡೂರ್ ಗೋಪಾಲಕೃಷ್ಣನ್, ಕೆ. ಜಯಕುಮಾರ್, ಡಾ. ಜಾರ್ಜ್ ಒನಕುರೆ ಅವರನ್ನೊಳಗೊಂಡ ಸಮಿತಿ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿದೆ.