ಕಾಸರಗೋಡು: ಮುಖ್ಯ ಮಂತ್ರಿಪಿಣರಾಯಿ ವಇಜಯನ್ ನೇತೃತ್ವದಲ್ಲಿ ನಡೆಯುತ್ತಿರುವ ನವಕೇರಳ ಯಾತ್ರೆಯನ್ನು ಪ್ರಧಾನ ಪ್ರತಿಪಕ್ಷಗಳಾದ ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಹಾಗೂ ಬಿಜೆಪಿ ಬಹಿಷ್ಕರಿಸಿರುವ ಮಧ್ಯೆ ಮುಸ್ಲಿಂಲೀಗ್ ಮುಖಂಡರೊಬ್ಬರು ಮುಖ್ಯಮಂತ್ರಿ ಜತೆ ವೆದಿಕೆ ಹಂಚಿಕೊಮಡಿರುವುದು ಐಕ್ಯರಂಗದಲ್ಲಿ ಚರ್ಚೆಗೆ ಕಾರಣವಾಗಿದೆ.
ಐಕ್ಯರಂಗದ ಮಿತ್ರಪಕ್ಷ ಮುಸ್ಲಿಂಲೀಗ್ ಮುಖಂಡ, ಮುಸ್ಲಿಂ ಲೀಗ್ ರಾಜ್ಯ ಕೌನ್ಸಿಲರ್ ಮತ್ತು ವಾರ್ಡ್ ಸಮಿತಿ ಅಧ್ಯಕ್ಷರಾಗಿರುವ ಎನ್.ಎ ಅಬೂಬಕ್ಕರ್ ಭಾನುವಾರ ಕಾಸರಗೋಡು ವಿಶ್ರಾಂತಿಗೃಹದಲ್ಲಿ ಆಯೋಜಿಸಲಾದ ಉಪಾಹಾರ ಚರ್ಚೆ ವೇಳೆ ಮುಖ್ಯಮಂತ್ರಿ ಜತೆ ಕಾಣಿಸಿಕೊಂಡಿದ್ದರು. ಅಭಿವೃದ್ಧಿ ವಿಷಯದ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಉದ್ಯಮಿಯಾಗಿ ಭಾಗವಹಿಸಿದ್ದೇನೆ ಎಂಬುದಾಗಿ ಎನ್.ಎ.ಅಬೂಬಕರ್ ಸಮರ್ಥಿಸಿಕೊಂಡಿದ್ದಾರೆ.
ಚುನಾವಣಾ ಪ್ರಚಾರ ತಂತ್ರವಾಗಿರುವ ಸಮಾವೇಶವನ್ನು ಐಕ್ಯರಂಗ ಬಹಿಷ್ಕರಿಸಿದ್ದು, ಐಕ್ಯರಂಗದ ಯಾವೊಬ್ಬ ನೇತಾರ ಸಮಾವೇಶದಲ್ಲಾಗಲಿ, ಇದಕ್ಕೆ ಸಂಬಂಧಿಸಿದ ಇತರ ಕಾರ್ಯಕ್ರಮಗಳಲ್ಲಾಗಲಿ ಭಾಗವಹಿಸುವುದನ್ನು ಸಮರ್ಥಿಸಿಕೊಳ್ಳಲಾಗದು ಎಂದು ಯೂತ್ ಲೀಗ್ ರಾಜ್ಯ ಉಪಾಧ್ಯಕ್ಷ ಅಶ್ರಫ್ ಎಡನೀರು ತಮ್ಮ ಫೇಸ್‍ಬುಕ್ ಪೋಸ್ಟ್‍ನಲ್ಲಿ ಹಂಚಿಕೊಮಡಿದ್ದಾರೆ.