ಬದಿಯಡ್ಕ: ಕೇಂದ್ರ ಸರ್ಕಾರದ ಯೋಜನೆಗಳನ್ನು ತನ್ನದೆಂದು ಹೇಳಿಕೊಳ್ಳುವ ಎಡರಂಗ ಸರ್ಕಾರವು ರಾಜ್ಯದ ಜನತೆಯನ್ನು ವಂಚಿಸುತ್ತಿದೆ. ಮೋದಿ ಸರ್ಕಾರದ 10 ವರ್ಷದ ಸಾಧನೆಯು ಜನಮಾನಸಕ್ಕೆ ತಲುಪಿದೆ. ಮತ್ತೊಮ್ಮೆ ದೇಶದ ಚುಕ್ಕಾಣಿ ನರೇಂದ್ರ ಮೋದಿಯರಿಗೆ ಸಿಗುವುದರಲ್ಲಿ ಯಾರಿಗೂ ಸಂದೇಹ ಬೇಡ. ಕೇಂದ್ರದ ಸಾಧನೆಯ ವಿರುದ್ಧ ರಾಜ್ಯ ಸರ್ಕಾರವು ಮಂಕಾಗಿದೆ ಎಂದು ಬಿಜೆಪಿ ಕೇರಳ ರಾಜ್ಯ ಕಾರ್ಯದರ್ಶಿ ವಕೀಲ ಕೆ.ಶ್ರೀಕಾಂತ್ ಅಭಿಪ್ರಾಯಪಟ್ಟರು.
ಕುಂಬ್ಡಾಜೆ ಪಂಚಾಯತ್ ಬಿಜೆಪಿ(ಎನ್‍ಡಿಎ)ನೇತೃತ್ವದಲ್ಲಿ ಮಾರ್ಪನಡ್ಕದಲ್ಲಿ ಬುಧವಾರ ನಡೆದ ಜನ ಪಂಚಾಯತ್ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿ ಸರ್ಕಾರದ 10 ವರ್ಷಗಳ ಸಾಧನೆಗಳನ್ನು ಜನಧನ್ ಯೋಜನೆ, ಉದ್ಯೋಗ ಖಾತ್ರಿ ಯೋಜನೆ, ಕೃಷಿ ಸಮ್ಮಾನ್ ಯೋಜನೆ, ಉಜ್ವಲ ಯೋಜನೆ ಬಗ್ಗೆ ತಿಳಿಸಿದರು. ರಾಜ್ಯ ಸರ್ಕಾರದ ವೈಫಲ್ಯದ ಬಗ್ಗೆ ಎಳೆಎಳೆಯಾಗಿ ಹೇಳಿದರು. ರಾಜ್ಯ ಸರ್ಕಾರ ನಡೆಸುತ್ತಿರುವ ನವಕೇರಳ ಸಭೆಯ ವಿಫಲತೆಯನ್ನು ತಿಳಿಸಿದರು.
ಬಿಜೆಪಿ ಪಂಚಾಯತಿ ಸಮಿತಿ ಅಧ್ಯಕ್ಷ ಹರೀಶ್ ಗೋಸಾಡ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರದಲ್ಲಿರುವುದು ಐಕ್ಯರಂಗ ಹಾಗೂ ಎಡರಂಗದ ಆಡಳಿತ ಎಂದು ಲೇವಡಿ ಮಾಡಿದರು. ಬಿಜೆಪಿ ಜಿಲ್ಲಾ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೊಸಾಡ, ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ, ಮಂಡಲಾಧ್ಯಕ್ಷ ಹರೀಶ್ ನಾರಂಪಾಡಿ, ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ ಆರ್, ಗೋಪಾಲಕೃಷ್ಣ ಮುಂಡೋಳುಮೂಲೆ, ಬಿಜೆಪಿ ಮಂಡಲ ಉಪಾಧ್ಯಕ್ಷ ಕೃಷ್ಣಶರ್ಮ ಜಿ, ನಳಿನಿ ಕೆ, ನೇತಾರರಾದ ಶೈಲಜಾ ಭಟ್, ರವೀಂದ್ರ ರೈ ಗೋಸಾಡ, ವಾಸುದೇವ ಭಟ್ ಉಪ್ಪಂಗಳ, ಯಶೋದಾ ಎನ್., ಸುನೀತಾ ಜೆ ರೈ, ಮೀನಾಕ್ಷಿ ಎಸ್, ಕೃಷ್ಣ ರೈ ಅಲಿಂಜಾ, ಉಮಾವತಿ ರೈ ಸೂರ್ಯ ಮಾಸ್ತರ್, ಜಯಪ್ರಕಾಶ್ ರೈ, ಸುರೇಶ್ ಬಿಕೆ, ರಘು ಮಾಚವು ಮೊದಲಾದವರು ಉಪಸ್ಥಿತರಿದ್ದರು. ಬಿಜೆಪಿ ಪಂಚಾಯಿತಿ ಪ್ರಧಾನ ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ ಸ್ವಾಗತಿಸಿ, ಕಾರ್ಯದರ್ಶಿ ರೋಶಿನಿ ಪೆÇಡಿಪ್ಪಳ ವಂದಿಸಿದರು.