ತಿರುವನಂತಪುರಂ: ವೆಂಗನೂರಿನಲ್ಲಿ ನಾಯಿಯನ್ನು ಸ್ಕೂಟರ್ ಹಿಂದೆ ಎಳೆದೊಯ್ದ ಬೈಕ್ ಸವಾರನ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಣಂಗೋಡು ಮೂಲದ ಅನಿಕುಮಾರ್ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಪಣಂಗೋಡು ಬಳಿ ರಸ್ತೆಯಲ್ಲಿ ನಾಯಿಯನ್ನು ಸ್ಕೂಟರ್‍ನ ಹಿಂದೆ ಎಳೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಆ ಮೂಲಕ ಹೋಗುತ್ತಿದ್ದ ಮತ್ತೊಬ್ಬ ಯುವಕ ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ. ಯುವಕ ಸೆರೆ ಹಿಡಿದಿರುವ ವಿಡಿಯೋದಲ್ಲಿ ನಾಯಿ ಹಲವು ಬಾರಿ ಕುಣಿಕೆ ಎಳೆದು ನರಳುತ್ತಿರುವ ಹೃದಯ ವಿದ್ರಾವಕ ದೃಶ್ಯ ಕಂಡುಬಂದಿತ್ತು.
ನಾಯಿ ಒದ್ದಾಡುತ್ತಿರುವುದನ್ನು ಕಂಡು ಯುವಕ ಬೈಕ್ ಸವಾರನನ್ನು ವಿಚಾರಿಸಿದ್ದು, ಬೇರೆಯವರು ಪ್ರಶ್ನಿಸಲು ಮುಂದಾದರು. ಆದರೆ ಇದು ಒಂದು ವರ್ಷದ ಹಿಂದೆ ತನ್ನ ಮನೆಯಿಂದ ನಾಪತ್ತೆಯಾಗಿದ್ದ ನಾಯಿ ಎಂದು ಬೈಕ್ ಸವಾರ ಹೇಳಿಕೊಂಡಿದ್ದು, ಅದನ್ನು ಕಂಡು ವಾಪಸ್ ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ. ಈ ದೃಶ್ಯಾವಳಿಗಳನ್ನು ಸೆರೆಹಿಡಿದ ಯುವಕನ ದೂರಿನ ಆಧಾರದ ಮೇಲೆ ವಿಝಿಂಜಂ ಪೋಲೀಸರು ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.